ಮಂಗಳವಾರ, ಜನವರಿ 25, 2022
28 °C

ಆಂಧ್ರಪ್ರದೇಶ: ಶೇ 23.29ರಷ್ಟು ವೇತನ ಹೆಚ್ಚಳ, ನಿವೃತ್ತ ವಯಸ್ಸು 62ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ತನ್ನ ನೌಕರರ ವೇತನವನ್ನು ಪರಿಷ್ಕರಿಸಿದ್ದು, ಶೇ 23.29ರವರೆಗೂ ಏರಿಕೆ ಮಾಡಿದೆ. ಅಲ್ಲದೆ, ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ವಿಸ್ತರಿಸಿದೆ.

ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆಗೆ ಚರ್ಚಿಸಿದ ಬಳಿಕ ವೇತನ ಪರಿಷ್ಕರಣೆಯನ್ನು ಪ್ರಕಟಿಸಿದರು. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಮೀರಿ ವೇತನ ಪರಿಷ್ಕರಿಸಲಾಗಿದೆ.

ಅಲ್ಲದೆ, ನೌಕರರ ಇತರೆ ಬೇಡಿಕೆಗಳನ್ನು ಈಡೇರಿಸುವ ಕುರಿತು ಜೂನ್‌ 30ರ ಗಡುವನ್ನು ಮುಖ್ಯಮಂತ್ರಿ ನಿಗದಿ ಪಡಿಸಿದ್ದಾರೆ. ಪರಿಷ್ಕೃತ ವೇತನವು ಜುಲೈ 1,2018ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಆದರೆ, ಪರಿ ಷ್ಕರಣೆಯಂತೆ ಆರ್ಥಿಕ ಸೌಲಭ್ಯ ಏಪ್ರಿಲ್‌ 1, 2020ರಿಂದ ಜಾರಿಗೆ ಬರುವಂತೆ ಪಾವತಿಯಾಗಲಿದೆ ಎಂದು ಮುಖ್ಯಮಂತ್ರಿ ಅವರು ನೌಕರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.

ವೇತನ ಪರಿಷ್ಕರಣೆಯಿಂದ ಬೊಕ್ಕಸಕ್ಕೆ ವಾರ್ಷಿಕ ₹10,247 ಕೋಟಿ ಹೊರೆಯಾಗಲಿದೆ. ಆಂಧ್ರಪ್ರದೇಶವು ಇನ್ನು ಮುಂದೆ ರಾಜ್ಯ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನೇ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು