ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಐದು ರಾಜ್ಯಗಳಿಂದ ಶೇ 60ರಷ್ಟು ಕೋವಿಡ್-19 ಪ್ರಕರಣ, ಶೇ 70ರಷ್ಟು ಸಾವು'

Last Updated 7 ಸೆಪ್ಟೆಂಬರ್ 2020, 12:14 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿನ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಿಂದಲೇ ಶೇ 60ರಷ್ಟು ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ಪೈಕಿ ಶೇ 62ರಷ್ಟು ಸಕ್ರಿಯ ಪ್ರಕರಣಗಳು ಮತ್ತು ಭಾರತದಲ್ಲಿ ವೈರಸ್‌ನಿಂದಾಗಿ ವರದಿಯಾದ ಒಟ್ಟಾರೆ ಸಾವಿನ ಪ್ರಕರಣಗಳಲ್ಲಿ ಶೇ 70ರಷ್ಟು ಸಾವುಗಳು ಐದು ರಾಜ್ಯಗಳಿಂದಲೇ ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಶೇ 21.6 ರಷ್ಟು ಪ್ರಕರಣಗಳಿದ್ದರೆ ಬಳಿಕ ಆಂಧ್ರ ಪ್ರದೇಶ (ಶೇ 11.8), ತಮಿಳು ನಾಡು (ಶೇ 11), ಕರ್ನಾಟಕ (ಶೇ 9.5) ಮತ್ತು ಉತ್ತರ ಪ್ರದೇಶದಲ್ಲಿ ಶೇ 6.3ರಷ್ಟು ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿನ ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಶೇ 26.76ರಷ್ಟು ಸಕ್ರಿಯ ಪ್ರಕರಣಗಳಿವೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (ಶೇ 11.30), ಕರ್ನಾಟಕ (ಶೇ 11.25), ಉತ್ತರ ಪ್ರದೇಶ (ಶೇ 6.98) ಮತ್ತು ತಮಿಳುನಾಡು (ಶೇ 5.83) ಸ್ಥಾನ ಪಡೆದಿವೆ.

ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ 11,915 ಜನರು ಚೇತರಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 9,575 ಮತ್ತು 7,826 ಜನರು ಚೇತರಿಸಿಕೊಂಡರೆ, ತಮಿಳುನಾಡು ಮತ್ತು ಉತ್ತರ ಪ್ರದೇಶ ಕ್ರಮವಾಗಿ 5,820 ಮತ್ತು 4,779 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ದೇಶದಲ್ಲಿ ಗುಣಮುಖರಾದವರ ಪೈಕಿ ಈ ಐದು ರಾಜ್ಯಗಳಿಂದಲೇ ಶೇ 57ರಷ್ಟು ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 32,50,429 ಜನರು ದೇಶದಲ್ಲಿ ಈವರೆಗೆ ಗುಣಮುಖರಾಗಿದ್ದಾರೆ.

ಹೆಚ್ಚಿನ ಪರೀಕ್ಷೆಯೊಂದಿಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳಿಂದಾಗಿ ಕೋವಿಡ್-19 ರೋಗಿಗಳು ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೆ ಮರಣ ಪ್ರಮಾಣ ಕೂಡ ತಗ್ಗಲು ಕಾರಣವಾಗಿದೆ. ಇದು ಶೇ 1.70ರಷ್ಟಿದೆ. ಪರಿಣಾಮಕಾರಿಯಾದ ಸ್ಟ್ಯಾಂಡರ್ಡ್ ಆಫ್ ಕೇರ್ ನಿಯಮಾವಳಿಗಳನ್ನು ಅನುಸರಿಸಿ ಪ್ರತ್ಯೇಕ ಮನೆಗಳು ಮತ್ತು ಸೌಲಭ್ಯಗಳ ಒದಗಿಸುವಿಕೆಯಿಂದಾಗಿ ಸೌಮ್ಯ ಮತ್ತು ಮಧ್ಯಮ ಪ್ರಕರಣಗಳ ಚೇತರಿಕೆಗೆ ಭಾರಿ ನೆರವು ನೀಡಿದಂತಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಒಟ್ಟಾರೆ 42 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕಳೆದ 24 ಗಂಟೆಗಳಲ್ಲಿ 90,802 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿದ್ದು, 8,82,542 ಸಕ್ರಿಯ ಪ್ರಕರಣಗಳಿವೆ. 32,50,429 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 71,642 ಜನರು ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT