ಮಂಗಳವಾರ, ಮಾರ್ಚ್ 21, 2023
29 °C

ಒಂದೇ ವರ್ಷದಲ್ಲಿ 215 ತಾಂತ್ರಿಕ ದೋಷದ ಪ್ರಕರಣ ದಾಖಲಿಸಿದ ಏರ್‌ ಇಂಡಿಗೊ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: 2022ರಲ್ಲಿ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಒಟ್ಟು 546 ತಾಂತ್ರಿಕ ದೋಷದ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

215 ಪ್ರಕರಣಗಳನ್ನು ವರದಿ ಮಾಡುವ ಮೂಲಕ ಇಂಡಿಗೊ ಏರ್‌ಲೈನ್ಸ್ ತಾಂತ್ರಿಕ ದೋಷದ ಪ್ರಕರಣ ದಾಖಲಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾಗರಿಕ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ. 

ಸ್ಪೈಸ್‌ಜೆಟ್ 143 ಹಾಗೂ ವಿಸ್ತಾರಾ ಏರ್‌ಲೈನ್ಸ್ 97 ತಾಂತ್ರಿಕ ತೊಂದರೆಗಳಿಗೆ ಸಂಬಂಧಿಸಿದ ಘಟನೆಗಳನ್ನು ವರದಿ ಮಾಡಿದೆ.

ಕಡಿಮೆ ದರದ ವಿಮಾನಯಾನ ಸಂಸ್ಥೆಗಳಿಂದಾಗಿ ದೇಶದಲ್ಲಿ ಹೆಚ್ಚಿನ ತಾಂತ್ರಿಕ ದೋಷದ ಪ್ರಕರಣಗಳು ವರದಿಯಾಗುತ್ತಿರುವುದು ಸತ್ಯವೇ ಎಂಬ ಪ್ರಶ್ನೆಗೆ, ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ. ಸಿಂಗ್, ಲಿಖಿತ ಉತ್ತರ ನೀಡಿದ್ದು, ವಿಮಾನದ ಕಾರ್ಯಾಚರಣೆಯ ಸಮಯದಲ್ಲಿ ತಾಂತ್ರಿಕ ತೊಂದರೆಗಳನ್ನು ಅನುಭವಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ತಾಂತ್ರಿಕ ದೋಷ ಪ್ರಕರಣಗಳು ಹೆಚ್ಚಾಗಲು ವಿಮಾನಗಳಲ್ಲಿ ಅಳವಡಿಸಲಾಗಿರುವ ಸಿಸ್ಟಮ್‌ಗಳು, ಉಪಕರಣಗಳ ಅಸಮರ್ಪಕ ನಿರ್ವಹಣೆ ಕಾರಣದಿಂದಾಗಿರಬಹುದು ಎಂದು ಸಿಂಗ್ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು