ಶನಿವಾರ, ಜುಲೈ 2, 2022
25 °C

ಮಹಿಳೆ ಮೇಲೆ ಆಸಿಡ್‌: ಬಾಲಾರೋಪಿಗೆ ಜಾಮೀನು ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಮಹಿಳೆಯೊಬ್ಬರ ಮೇಲಿನ ಆಸಿಡ್‌ ದಾಳಿ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬಾಲಾರೋಪಿಗೆ ಬುಧವಾರ ಇಲ್ಲಿನ ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ಜಾಮೀನು ನಿರಾಕರಿಸಿದೆ.

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ತೌಸೀಫ್‌ ಅಹ್ಮದ್‌ ಮ್ಯಾಗ್ರೆ, ಬಾಲಾರೋಪಿಯ ಜಾಮೀನು ತಿರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿದ್ದಾರೆ.

‘ಇಂತಹ ಪ್ರಕರಣಗಳಲ್ಲಿ ಬಾಲಾರೋಪಿಯನ್ನು ಬಿಡುಗಡೆ ಮಾಡಿದರೆ ನ್ಯಾಯಾಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗುತ್ತದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಧಕ್ಕೆಯಾಗುತ್ತದೆ.ಆರೋಪಿ ಎಸಗಿರುವ ಘೋರ ಕೃತ್ಯದಿಂದ ಸಂತ್ರಸ್ತೆ ಕುಟುಂಬ ಹಾಗೂ ಸಮಾಜದ ಮೇಲೆ ವಿಸ್ತೃತ ನೆಲೆಯ ಮೇಲೆ ಪರಿಣಾಮಗಳನ್ನು ಆಧರಿಸಿ ಬಾಲಾರೋಪಿಗೆ ಜಾಮೀನು ನಿರ್ಧರಿಸಬೇಕಿದೆ’ ಎಂದು ’ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು