ಬುಧವಾರ, ಮಾರ್ಚ್ 3, 2021
19 °C

ಗುಜರಾತ್ ಪಾಲಿಕೆ ಚುನಾವಣೆ: ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್‌ಗೆ ಹಿನ್ನಡೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PTI Photo

ಅಹಮದಾಬಾದ್: ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು ಆರಂಭಿಕ ಹಂತಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಬಿಜೆಪಿಯು 58 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಜಮ್‌ಜೋಧ್‌ಪುರ, ಥಾಲ್ಟೇಜ್, ವಸ್ತ್ರಾಪುರ, ಅಸರ್ವಾ, ಸೈಜ್‌ಪುರ, ನವಾ ವಡಾಜ್ ಹಾಗೂ ನವರಂಗ್‌ಪುರ ವಾರ್ಡ್‌ಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ದರಿಯಾಪುರ, ಚಂದ್‌ಖೇಡ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಬೆಹ್ರಾಮ್‌ಪುರದಲ್ಲಿ ಎಐಎಂಐಎಂ ಮುನ್ನಡೆ ಕಾಯ್ದುಕೊಂಡಿದೆ.

ಓದಿ: 

ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಆಮ್‌ ಆದ್ಮಿ ಪಕ್ಷವು (ಎಎಪಿ) ಸೂರತ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡಿದೆ.

ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಭವಾನಗರ್ ಹಾಗೂ ಜಾಮಾನಗರ್‌ ಪಾಲಿಕೆಗಳ 144 ವಾರ್ಡ್‌ಗಳ 576 ಸ್ಥಾನಗಳಿಗೆ ಫೆಬ್ರುವರಿ 21ರಂದು ಚುನಾವಣೆ ನಡೆದಿತ್ತು.

ಈ ಎಲ್ಲ ನಗರ ಪಾಲಿಕೆಗಳಲ್ಲೂ ಸದ್ಯ ಬಿಜೆಪಿ ಆಡಳಿತವಿದೆ.

ಓದಿ: 

ಫೆಬ್ರುವರಿ 21ರಂದು ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆದಿದ್ದು, ಶೇ 46.08ರಷ್ಟು ಮತ ಚಲಾವಣೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು.

ಅಹಮದಾಬಾದ್‌ನಲ್ಲಿ ಅತಿ ಕಡಿಮೆ, ಶೇ 42.51ರಷ್ಟು ಮತದಾನವಾಗಿತ್ತು. ಜಾಮಾನಗರ್‌ನಲ್ಲಿ ಅತಿಹೆಚ್ಚು, ಶೇ 53.38ರಷ್ಟು ಮತದಾನವಾಗಿತ್ತು. ರಾಜ್‌ಕೋಟ್‌ನಲ್ಲಿ ಶೇ 50.72, ಭವಾನಗರ್‌ನಲ್ಲಿ ಶೇ 49.46, ವಡೋದರಾದಲ್ಲಿ ಶೇ 47.84 ಹಾಗೂ ಸೂರತ್‌ನಲ್ಲಿ ಶೇ 47.14ರಷ್ಟು ಮತದಾನವಾಗಿತ್ತು.

ಓದಿ: 

ಒಟ್ಟು 1.14 ಕೋಟಿ ಮತದಾರರ ಪೈಕಿ 52.83 ಲಕ್ಷ ಮಂದಿ ಮತ ಚಲಾಯಿಸಿದ್ದರು.

81 ಪುರಸಭೆಗಳು, 31 ಜಿಲ್ಲಾ ಪಂಚಾಯಿತಿಗಳು ಹಾಗೂ 231 ತಾಲ್ಲೂಕು ಪಂಚಾಯಿತಿ ಚುನಾವಣೆ ಫೆಬ್ರುವರಿ 28ಕ್ಕೆ ನಿಗದಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು