ಬುಧವಾರ, ನವೆಂಬರ್ 25, 2020
23 °C

ಕುನಾಲ್ ಕಮ್ರಾ ವಿರುದ್ಧ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾಡಿರುವ ‘ಅಶ್ಲೀಲಕರ ಶೈಲಿಯ ಟ್ವೀಟ್’ಗಾಗಿ ಹಾಸ್ಯ ಭಾಷಣಕಾರ ಕುನಾಲ್ ಕಮ್ರಾ ವಿರುದ್ಧ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣು
ಗೋಪಾಲ್‌ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ.

ನಿಂದನೆ ಮೊಕದ್ದಮೆ ದಾಖಲಿಸಲು ಅಟಾರ್ನಿ ಜನರಲ್ ಅವರ ಅನುಮೋದನೆ ಅಗತ್ಯವಾಗಿದೆ. ನವೆಂಬರ್ 18ರಂದು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿ ನಿಂದನೆ ಮೊಕದ್ದಮೆ ದಾಖಲಿಸಲು ವಕೀಲ ಅನುಜ್ ಸಿಂಗ್ ಅನುಮೋದನೆ ಕೋರಿದ್ದರು.

ಕಮ್ರಾ ಅವರು ಎರಡು ಬೆರಳು ತೋರಿಸಿರುವ ಕ್ರಮ ಉದ್ದೇಶಪೂರ್ವಕವಾಗಿ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸುವ ಉದ್ದೇಶ ಹೊಂದಿದೆ. ಇದು, ಸುಪ್ರೀಂ ಕೋರ್ಟ್‌ಗೆ ಮಾಡಿದ ಅಪಮಾನಕ್ಕೆ ಸಮನಾದುದು’ ಎಂದು ವೇಣುಗೋಪಾಲ್ ಅವರು ವಕೀಲರಿಗೆ ಅನುಮೋದನೆ ನೀಡಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.