ಭಾನುವಾರ, ಏಪ್ರಿಲ್ 2, 2023
33 °C

AIIMS: ಚೀನಾದ ಐಪಿ ವಿಳಾಸಗಳ ಒದಗಿಸುವಂತೆ ಸಿಬಿಐ ಕೋರಿದ ದೆಹಲಿ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ದೆಹಲಿಯ ಏಮ್ಸ್‌ ಆಸ್ಪತ್ರೆಯ ಸರ್ವರ್‌ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಚೀನಾ ಮತ್ತು ಹಾಂಗ್‌ಕಾಂಗ್‌ ಮೂಲದ ಇ–ಮೇಲ್‌ಗಳ ಐಪಿ ವಿಳಾಸಗಳ ಕುರಿತು ಇಂಟರ್‌ಪೋಲ್‌ನಿಂದ ವಿವರಣೆ ಪಡೆಯುವಂತೆ ದೆಹಲಿ ಪೊಲೀಸರು ಸಿಬಿಐಗೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನವೆಂಬರ್‌ 23ರಂದು ಏಮ್ಸ್‌ ಸರ್ವರ್‌ ಹ್ಯಾಕ್‌ ಮಾಡುವ ಪ್ರಯತ್ನ ನಡೆದಿತ್ತು. ಇದಕ್ಕೆ ಸಂಬಂಧಿಸಿ ಸುಲಿಗೆ ಮತ್ತು ಸೈಬರ್‌ ಭಯೋತ್ಪಾದನೆ ಮೊಕದ್ದಮೆಗಳನ್ನು ದೆಹಲಿ ಪೊಲೀಸ್‌ ಗುಪ್ತಚರ ವಿಭಾಗವು ನವೆಂಬರ್‌ 25ರಂದು ದಾಖಲಿಸಿಕೊಂಡಿತ್ತು. ಚೀನಾ ಮತ್ತು ಹಾಂಗ್‌ಕಾಂಗ್‌ನ ಕೆಲ ಸ್ಥಳಗಳಿಂದ ಸರ್ವರ್‌ ಹ್ಯಾಕ್‌ ಮಾಡಲಾಗಿದೆ ಎಂದು ಶಂಕಿಸಲಾಗಿದೆ. 

ಈ ದಾಳಿಯಿಂದಾಗಿ ಆಸ್ಪತ್ರೆಯ ಹೊರರೋಗಿ ವಿಭಾಗ ಮತ್ತು ಒಳರೋಗಿ ವಿಭಾಗದ ಡಿಜಿಟಲ್‌ ಸೇವೆ ಮೇಲೆ ಅಡ್ಡ ಪರಿಣಾಮ ಉಂಟಾಗಿತ್ತು. 

ಇಂಟರ್‌ಪೋಲ್‌ ಮಾಹಿತಿಗಳಿಗೆ ಸಿಬಿಐ ನೋಡಲ್‌ ಸಂಸ್ಥೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು