ಶುಕ್ರವಾರ, ಮೇ 14, 2021
31 °C

ಮುಂಬೈ: ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಅಮರಾವತಿ ದೇಶಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ವಿದರ್ಭ ವಿಭಾಗದ ಅಮರಾವತಿ ಜಿಲ್ಲೆಯು ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಮಾದರಿ ದೇಶದ ಗಮನ ಸೆಳೆದಿದೆ. 

ಫೆಬ್ರುವರಿ ಆರಂಭದಲ್ಲಿ ಜಿಲ್ಲೆಯಲ್ಲಿ ದಿನಕ್ಕೆ 1,200 ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಮೊದಲಿಗೆ ವಾರಾಂತ್ಯದ ಲಾಕ್‌ಡೌನ್ ವಿಧಿಸಲಾಯಿತು. ಬಳಿಕ 10–12 ದಿನಗಳ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಯಿತು. ಪ್ರಕರಣಗಳು 250ಕ್ಕೆ ಇಳಿಕೆಯಾದವು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ತಿಳಿಸಿದ್ದಾರೆ.

ಲಾಕ್‌ಡೌನ್‌ಗೆ ವಿರೋಧ ವ್ಯಕ್ತವಾದರೂ ಅದರಲ್ಲಿ ಯಶಸ್ಸು ಸಿಕ್ಕಿತು. ಪರಿಸ್ಥಿತಿ ತಿಳಿಯಾದ ಬಳಿಕ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಯಿತು. ಜಿಲ್ಲೆಯಲ್ಲಿ ದಿನಕ್ಕೆ 5 ಸಾವಿರ ಮಂದಿಗೆ ಲಸಿಕೆ ಹಾಕಲಾಯಿತು. ಮಹಾರಾಷ್ಟ್ರ ಸರ್ಕಾರವು ಈಗ ಅಮರಾವತಿ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ಠಾಕೂರ್ ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು