ಪೋರ್ಟ್ ಬ್ಲೇರ್: ಕೋವಿಡ್ ಲಸಿಕೆಯ ಎರಡೂ ಡೋಸ್ ವಿತರಣೆಯಲ್ಲಿ ಅಂಡಮಾನ್ ಹಾಗೂ ನಿಕೋಬರ್ ದ್ವೀಪದಲ್ಲಿ ಶೇ.ರಷ್ಟು ಗುರಿ ಸಾಧನೆಯಾಗಿದೆ.ಈ ಮೂಲಕ ಸಂಪೂರ್ಣ ಲಸಿಕೆ ಅಭಿಯಾನ ಹಮ್ಮಿಕೊಂಡ ದೇಶದ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಸಕ್ತ ವರ್ಷಾರಂಭದಲ್ಲಿ ಜನವರಿ 16ರಂದು ಲಸಿಕೆ ಅಭಿಯಾನವು ಆರಂಭಗೊಂಡಿತು. ಸಂಪೂರ್ಣವಾಗಿ ಕೋವಿಶೀಲ್ಡ್ ಲಸಿಕೆ ವಿತರಿಸಿ ಈ ಸಾಧನೆಗೈದಿದೆ.

ಇದನ್ನೂ ಓದಿ:Covid India Update| ಇಂದು 7,081 ಪ್ರಕರಣಗಳು ಪತ್ತೆ: 264 ಸಾವು

ಅಂಡಮಾನ್‌ನಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನವು ಅಷ್ಟು ಸುಲಭವಾಗಿರಲಿಲ್ಲ. ಉತ್ತರದಿಂದ ದಕ್ಷಿಣಕ್ಕೆ 800 ಕಿ.ಮೀ.ಗಳಷ್ಟು ದೂರದಲ್ಲಿ 836 ದ್ವೀಪಗಳಲ್ಲಿ ಹರಡಿಕೊಂಡಿರುವ ಕೇಂದ್ರಾಡಳಿತ ಪ್ರದೇಶದ ಕೋವಿಡ್ ಲಸಿಕೆ ವಿತರಣೆಯು ಅತ್ಯಂತ ಸವಾಲಿನಿಂದ ಕೂಡಿತ್ತು ಎಂದು ಅಲ್ಲಿನ ಆಡಳಿತವು ತಿಳಿಸಿದೆ.

ಹೆಲ್ತ್ ಬುಲೆಟಿನ್ ಪ್ರಕಾರ, ದ್ವೀಪದ ಜನಸಂಖ್ಯೆಯ ಶೇ. 74.67 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದೆ.

ಏತನ್ಮಧ್ಯೆ ಅಂಡಮಾನ್‌ನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 7,701ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.