ವಯನಾಡ್: ಕೇರಳದಲ್ಲಿ ಮತ್ತೊಂದು ಕಲುಷಿತ ಆಹಾರ ಸೇವನೆ ಪ್ರಕರಣ ವರದಿಯಾಗಿದ್ದು, ವಯನಾಡ್‌ನ ಕೆಲವು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ 18 ಮಂದಿ ಪ್ರವಾಸಿಗರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ.

23 ಮಂದಿ ಪ್ರವಾಸಿಗರು ತಿರುವನಂತಪುರದಿಂದ ವಯನಾಡ್‌ಗೆ ಬಂದಿದ್ದರು. ಇವರೆಲ್ಲ ಸೋಮವಾರ ರಾತ್ರಿ ವಯನಾಡ್‌ನ ವಿವಿಧೆಡೆಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ್ದರು ಎಂದು ವಯನಾಡ್‌ನ ಕಂಬಲಕ್ಕಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ರೆಸ್ಟೋರೆಂಟ್‌ನಲ್ಲಿ ಸೇವಿಸಿದ ಯಾವ ಆಹಾರದಿಂದ ಪ್ರವಾಸಿಗರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದನ್ನು ಈಗಲೇ ತಿಳಿಸಲಾಗದು ಎಂದೂ ಅವರು ಹೇಳಿದ್ದಾರೆ.

ಕಾಸರಗೋಡು: ಕಲುಷಿತ ಆಹಾರ ಸೇವಿಸಿ ಓರ್ವ ಬಾಲಕಿ ಸಾವು; 18 ಮಂದಿ ಅಸ್ವಸ್ಥ

ಕಲ್ಪೆಟ್ಟಾದಲ್ಲಿ ಸೋಮವಾರ ರಾತ್ರಿ ಆಹಾರ ಸೇವಿಸಿದ್ದ ಪ್ರವಾಸಿಗರು ಅಸ್ವಸ್ಥರಾಗಿದ್ದಾರೆ. ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಮೂರು ರೆಸ್ಟೋರೆಂಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಸದ್ಯ 18 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕಾಸರಗೋಡಿನಲ್ಲಿ ಶಂಕಿತ ಕಲುಷಿತ ಆಹಾರ ಸೇವನೆಯಿಂದ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿದ್ದರು. ಇದಾದ ಬಳಿಕ ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿಯೂ ಶಂಕಿತ ಕಲುಷಿತ ಆಹಾರ ಸೇವನೆಪ್ರಕರಣಗಳು ವರದಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.