ಮಂಗಳವಾರ, ಜನವರಿ 31, 2023
18 °C

ಬಿಎಸ್‌ಎಫ್‌ನಿಂದ ಶಸ್ತ್ರಧಾರಿ ಪಾಕ್‌ ನುಸುಳುಕೋರನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಚಂಡೀಗಢ: ಪಂಜಾಬ್‌ನ ಭಾರತ– ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಶಸ್ತ್ರಧಾರಿಯಾಗಿ ದೇಶದೊಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಗುರುದಾಸ್‌ಪುರದ ಅಜ್ನಲಾ ಸೆಕ್ಟರ್‌ನ ಚನ್ನಾ ಗಡಿ ಪೋಸ್ಟ್‌ನ ಬಿಎಸ್‌ಎಫ್‌ ಯೋಧರು ಗಡಿಯ ಬಳಿ ಶಂಕಾಸ್ಪದ ಚಲನವಲನಗಳನ್ನು ಗಮನಿಸಿದ ಬಳಿಕ ಒಳನುಸುಳುಕೋರನನ್ನು ಹತ್ಯೆ ಮಾಡಲಾಗಿದೆ’ ಎಂದು ಬಿಎಸ್‌ಎಫ್‌ನ ವಕ್ತಾರ ಹೇಳಿದ್ದಾರೆ.

‘ಮೃತದೇಹದ ಬಳಿ ಒಂದು ಬಂದೂಕು ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ. ಇದಕ್ಕೆ ಮೊದಲು ಇಬ್ಬರು ಪಾಕ್‌ ನುಸುಳುಕೋರರ ಹತ್ಯೆ ನಡೆದಿತ್ತು ಎಂದು ವರದಿಯಾಗಿತ್ತು. ಆದರೆ ಬಿಎಸ್‌ಎಫ್‌ ಬಳಿಕ ಹೇಳಿಕೆ ನೀಡಿ, ಒಬ್ಬನ ಹತ್ಯೆಯನ್ನಷ್ಟೇ ದೃಢಪಡಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು