ಶನಿವಾರ, ಜನವರಿ 28, 2023
15 °C

ದೆಹಲಿಯಲ್ಲಿ ಡೆಂಗಿ ತಡೆ ಅಭಿಯಾನಕ್ಕೆ ಅರವಿಂದ್‌ ಕೇಜ್ರಿವಾಲ್ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ನಿವಾಸದಲ್ಲಿದ್ದ ನಿಂತ ನೀರನ್ನು ತೆರವುಗೊಳಿಸುವ ಮೂಲಕ ‘ಡೆಂಗಿ ತಡೆ ಅಭಿಯಾನ’ಕ್ಕೆ ಭಾನುವಾರ ಚಾಲನೆ  ನೀಡಿದ್ದಾರೆ. ಈ ಅಭಿಯಾನ 10 ವಾರಗಳವರೆಗೆ ನಡೆಯಲಿದೆ. 

ಕ್ರಿಮಿ ಕೀಟಗಳಿಂದ ಮಾನವನಿಗೆ ಹರಡುವ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

‘ಕಳೆದ ವರ್ಷದಂತೆ ಈ ಬಾರಿಯೂ ದೆಹಲಿಯ ಜನರು ಒಟ್ಟಾಗಿ ಡೆಂಗಿ ವಿರುದ್ಧ ಹೋರಾಡಲಿದ್ದೇವೆ.ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಡೆಂಗಿ ವಿರುದ್ಧದ 10 ವಾರಗಳ ಅಭಿಯಾನವನ್ನು ಆರಂಭಿಸೋಣ. ನಾನು ನನ್ನ ಮನೆಯಲ್ಲಿ ನಿಂತ ನೀರಿದೆಯೇ ಎಂಬುದನ್ನು ಪರಿಶೀಲಿಸುತ್ತೇನೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಪರಿಶೀಲಿಸಿ ಸ್ವಚ್ಛಗೊಳಿಸಿ. ಈ ಬಾರಿಯೂ ಡೆಂಗಿಯನ್ನು ಸೋಲಿಸೋಣ ಎಂದು ಅರವಿಂದ್‌ ಕೇಜ್ರಿವಾಲ್‌ ಅವರು ಟ್ವೀಟ್‌ ಮಾಡಿದ್ದಾರೆ.

ದೆಹಲಿ ಉಪಮುಖ್ಯ ಮಂತ್ರಿ ಮನೀಶ್‌ ಸಿಸೋಡಿಯಾ, ಸಚಿವರಾದ ಪಾಲ್‌ ಗೌತಮ್, ಕೈಲಾಶ್‌ ಗೆಹ್ಲೋಟ್‌ ಅವರು ಅಭಿಯಾನಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಮನೀಶ್‌ ಸಿಸೋಡಿಯಾ, ’ನಮ್ಮ ಮನೆಯಲ್ಲಿ ಯಾವುದೇ ರೀತಿಯಲ್ಲೂ ನೀರು ಅಲ್ಲಲ್ಲಿ ಇರುವುದಿಲ್ಲ ಎಂದು ನಮಗೆ ಎನಿಸುತ್ತದೆ. ಆದರೆ 10 ನಿಮಿಷಗಳ ಕಾಲ ಸರಿಯಾಗಿ ಪರಿಶೀಲನೆ ನಡೆಸಿದಾಗ ನಿಮಗೆ ಒಂದಾದರೂ ಕಾಣಲು ಸಿಗುತ್ತದೆ. ಹಾಗಾಗಿ ನಿಮ್ಮ ಕುಟುಂಬಗಳ ರಕ್ಷಣೆಗಾಗಿ ಸರ್ಕಾರದ #10Hafte10Baje10Minute ಅಭಿಯಾನದಲ್ಲಿ ಭಾಗಿಯಾಗುವುದು ಅನಿವಾರ್ಯ’ ಎಂದು ಅವರು ಹೇಳಿದರು.

ಕಳೆದ ವರ್ಷವೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಡೆಂಗಿ ತಡೆ ಅಭಿಯಾನವನ್ನು ನಡೆಸಲಾಗಿತ್ತು. ಇದರಿಂದಾಗಿ ಡೆಂಗಿ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿತ್ತು. 2015ರಲ್ಲಿ 15,867 ಡೆಂಗಿ ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ 60 ಮಂದಿ ಸಾವನ್ನಪ್ಪಿದ್ದರು. ಆದರೆ ಕಳೆದ ವರ್ಷ 2,036 ಡೆಂಗಿ ಪ್ರಕರಣಗಳಿದ್ದವು. 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು