ಚಾಲನೆ ತರಬೇತಿ ಪಡೆಯಲು ಸೇನೆ ಸೇರಬೇಕೇ?: ಅಗ್ನಿಪಥ ಯೋಜನೆ ಬಗ್ಗೆ ಓವೈಸಿ ಪ್ರಶ್ನೆ

ಹೈದರಾಬಾದ್: ಚಾಲನೆ ತರಬೇತಿ ಪಡೆದು ಚಾಲಕರಾಗುವುದಾದರೆ ಅಥವಾ ಬೇರೆ ವೃತ್ತಿ ಮಾಡುವುದಾದರೆ, ನಾಲ್ಕು ವರ್ಷ ಸೇನೆಯಲ್ಲಿರಬೇಕೇ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು, ಅಗ್ನಿವೀರರಿಗೆ ಚಾಲನೆ, ಧೋಬಿ ಕೆಲಸ ಸೇರಿದಂತೆ ಇತರ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದ್ದರು. ಅವರ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಒವೈಸಿ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಸಾಟಿಯಿಲ್ಲದ್ದು. ಯೋಧರು ದೇಶಕ್ಕಾಗಿ ವೈರಿಗಳನ್ನು ಕೊಲ್ಲುವ ಅಥವಾ ಪ್ರಾಣತ್ಯಾಗಕ್ಕೂ ಸಿದ್ಧರಿರುತ್ತಾರೆ. ಚಾಲಕರಾಗಲು ಅಥವಾ ಬೇರೆ ಕೆಲಸ ಮಾಡಲು ಬಯಸುವುದಾದರೆ, ಅವರು ಸೇನೆಯಲ್ಲಿ ನಾಲ್ಕು ವರ್ಷ ಇರಬೇಕೇ? ಎಂದು ಪ್ರಶ್ನಿಸಿದ್ದಾರೆ.
'ಬಿಜೆಪಿಯು ಅಗ್ನಿವೀರರನ್ನು ಕಾವಲುಗಾರರನ್ನಾಗಿ ನೇಮಿಸಿಕೊಳ್ಳಲು ನೋಡುತ್ತಿದೆಯೇ ಹೊರತು ಬೇರೇನೂ ಅಲ್ಲ ಎಂಬುದು ಸ್ಪಷ್ಟ' ಎಂದು ದೂರಿರುವ ಓವೈಸಿ, ಪ್ರಧಾನಿ ಮೋದಿ ಅವರು ದೇಶದ ಭದ್ರತೆಯ ವಿಚಾರದಲ್ಲಿ ಆಟವಾಡುತ್ತಿದ್ದು, ಯುವಕರ ಭವಿಷ್ಯವನ್ನು ನಾಶಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
It’s clear that BJP sees Agniveers as nothing but chowkidaars on hire
.@pmoindia is playing with India’s security and destroying the future of youth @rajnathsingh
ye jabr bhī dekhā hai tārīḳh kī nazroñ ne
lamhoñ ne ḳhatā kī thī sadiyoñ ne sazā paa.ī 2/2— Asaduddin Owaisi (@asadowaisi) June 19, 2022
ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಒವೈಸಿ, 'ಈ ಕುತಂತ್ರದ ಕೆಲಸವನ್ನು ನಿಲ್ಲಿಸುವಂತೆ, ದೇಶದ ಯುವಕರ ಮಾತುಗಳನ್ನು ಆಲಿಸುವಂತೆ, ಕ್ರೂರ ಯೋಜನೆಯನ್ನು ಹಿಂಪಡೆಯುವಂತೆ ಮತ್ತು ಸೇನಾ ಪಡೆಗಳಲ್ಲಿನ ಯೋಧರು, ಶಸ್ತ್ರಾಸ್ತ್ರಗಳ ಕೊರತೆಯನ್ನು ಸರಿದೂಗಿಸುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಚೇರಿ ಸೆಕ್ಯುರಿಟಿಗೆ ಅಗ್ನಿವೀರರಿಗೇ ಮೊದಲ ಆದ್ಯತೆ: ವಿಜಯವರ್ಗೀಯ ವಿವಾದ
ಮುಂದುವರಿದು, 'ಸೇನೆಯಿಂದ ನಿವೃತರಾದ ಯೋಧರನ್ನು ತಮ್ಮ ಕಚೇರಿಗಳ ಕಾವಲುಗಾರರನ್ನಾಗಿ ನೇಮಿಸಿಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಗೌರವಯುತವಾದ ಸೇನೆಗೆ ಮತ್ತು ಸೈನಿಕರಿಗೆ ಮೋದಿ ಅವರ ಪಕ್ಷ ನೀಡುವ ಘನತೆ ಇದೆಯೇ?' ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, 'ಇಂತಹ ಆಡಳಿತ ಪಕ್ಷವನ್ನು ದೇಶದಲ್ಲಿ ಹೊಂದಿರುವುದು ದುರದೃಷ್ಟಕರ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
I once again appeal to the government to stop this devious manner of working, listen to the youth of this country, immediately rollback this cruel scheme of contractual recruitment and make up the shortfall in men and equipment for our armed forces. https://t.co/FCTQ6e99Cm
— Asaduddin Owaisi (@asadowaisi) June 19, 2022
'ಯಾವುದೇ ಚಿಂತನೆ, ಯೋಜನೆಗಳಿಲ್ಲದೆ ಕೈಗೊಂಡ ನೋಟುರದ್ದು, ಲಾಕ್‌ಡೌನ್‌ನಂತಹ ದುಡುಕು ನಿರ್ಧಾರಗಳು, ಭಾರತದ ಆರ್ಥಿಕತೆ ಮತ್ತು ಸಮಾಜದ ಮೇಲೆ ಉಂಟುಮಾಡಿದ ದುಷ್ಪರಿಣಾಮಗಳನ್ನು ನೋಡಿದ್ದೇವೆ' ಎಂದಿರುವ ಅವರು, 'ಪ್ರಧಾನಿ ಮೋದಿ ಅವರು ರಾಷ್ಟ್ರದ ಭದ್ರತೆ ವಿಚಾರದಲ್ಲಿಯೂ ಅಂತಹದೇ ಕೆಲಸ ಮಾಡಲು ಹೊರಟಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.