ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠಾಣ್ ವಿವಾದ: ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ಪ್ರಧಾನಿ ಮೋದಿ ಸೂಚನೆ

Last Updated 18 ಜನವರಿ 2023, 5:50 IST
ಅಕ್ಷರ ಗಾತ್ರ

ಪಠಾಣ್ ವಿವಾದ: ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಚಲನಚಿತ್ರಗಳ ಬಗ್ಗೆ ಅನಗತ್ಯ ವ್ಯಾಖ್ಯಾನ ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾರುಖ್ ಖಾನ್ ಅವರ ಚಿತ್ರ 'ಪಠಾಣ್' ಬಿಡುಗಡೆಗೆ ಸಜ್ಜಾಗಿದೆ. ಆದರೆ ಈ ಚಿತ್ರದ 'ಬೇಷರಾಮ್ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆ ತೊಟ್ಟಿದ್ದು, ಇದು ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಿತ್ರ ತಯಾರಕರನ್ನು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ದೇಶದಲ್ಲಿರುವ ಅಲ್ಪಸಂಖ್ಯಾತರಾದ ಬೋಹ್ರಾಗಳು, ಪಸ್ಮಾಂಡಾಗಳು ಮತ್ತು ಸಿಖ್ಖರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವು ಮುಖ್ಯ. ಚುನಾವಣೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳದೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ತಿಳಿಸಿದರು.

ಈ ಚಿತ್ರದಲ್ಲಿ ದೀಪಿಕಾ ಧರಿಸಿರುವ ತುಂಡು ಉಡುಗೆ ‘ಅಶ್ಲೀಲ’ ಎಂದು ಭಾವಿಸಿರುವುದರಿಂದ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವಿವಾದಗಳ ಮಧ್ಯೆ ಶಾರುಖ್ ಅಭಿನಯದ ಬಹು ನೀರಿಕ್ಷಿತ ಚಿತ್ರ 'ಪಠಾಣ್’ ಇದೇ 25ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT