ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ 'ಬಾಬಾ ಕಾ ದಾಬಾ' ಮಾಲೀಕ ಕಾಂತಾ ಪ್ರಸಾದ್ ದೂರು

Last Updated 2 ನವೆಂಬರ್ 2020, 12:59 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ದೆಹಲಿಯ ಮಾಳವಿಯಾ ನಗರದಲ್ಲಿ ಬಾಬಾ ಕಾ ದಾಬಾ ನಡೆಸುತ್ತಿರುವ 80 ವರ್ಷದ ಕಾಂತಾ ಪ್ರಸಾದ್ ಇದೀಗ ಯೂಟ್ಯೂಬರ್ ಗೌರವ್ ವಾಸನ್ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಷ್ಟದಲ್ಲಿದ್ದ 'ಬಾಬಾ ಕಾ ದಾಬಾ'ಕ್ಕೆ ಲಾಕ್‌ಡೌನ್ ತೆರವುಗೊಂಡ ನಂತರವೂ ಗ್ರಾಹಕರು ಬರದೇ ಇದ್ದಾಗ ವೃದ್ಧ ದಂಪತಿಗಳು ಕಣ್ಣೀರು ಹಾಕಿದ್ದರು. ಈ ವೃದ್ಧ ದಂಪತಿಗಳ ಸಂಕಟವನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದ ವಾಸನ್ ಟ್ವಿಟರ್‌ನಲ್ಲಿ ಅದನ್ನು ಶೇರ್ ಮಾಡಿ ದಂಪತಿಗಳಿಗೆ ನೆರವಾಗುವಂತೆ ಮನವಿ ಮಾಡಿದ್ದರು.

ವಾಸನ್ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಾಬಾ ಕಾ ದಾಬಾಕ್ಕೆ ಜನರು ಭೇಟಿ ನೀಡಲು ತೊಡಗಿದ್ದರು. ಆದರೆ ನನಗೆ ಮತ್ತು ನನ್ನ ಪತ್ನಿಗೆ ಸಹಾಯಹಸ್ತವಾಗಿ ಲಭಿಸಿದ ಹಣವನ್ನು ವಾಸನ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದುಕಾಂತಾ ಪ್ರಸಾದ್ ದೂರು ನೀಡಿದ್ದಾರೆ.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಜತೆ ಮಾತನಾಡಿದ್ದ ಕಾಂತಾ ಪ್ರಸಾದ್ ನನಗೆ ವಾಸನ್ ಅವರಿಂದ₹2 ಲಕ್ಷದ ಚೆಕ್ ಮಾತ್ರ ಸಿಕ್ಕಿದೆ. ಈಗ ನಮ್ಮಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನವರು ಸೆಲ್ಫಿ ಕ್ಲಿಕ್ಕಿಸುವುದಕ್ಕಾಗಿ ಮಾತ್ರ ಬರುತ್ತಾರೆ. ಇದಕ್ಕಿಂತ ಮುಂಚೆ ನಾನು ದಿನಕ್ಕೆ ₹10,000 ಸಂಪಾದನೆ ಮಾಡುತ್ತಿದ್ದೆ.ಈಗ ₹3,000- ₹5,000 ಸಂಪಾದನೆ ಅಷ್ಟೇ ಆಗುತ್ತಿರುವುದು ಎಂದು ಹೇಳಿದ್ದಾರೆ.

ಮಾಳವಿಯಾ ನಗರದ ಪೊಲೀಸ್ ಠಾಣೆಯಲ್ಲಿಪ್ರಸಾದ್ ,ವಾಸನ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಕುಟುಂಬಕ್ಕೆ ಬಂದ ದೇಣಿಗೆಯ ಬಗ್ಗೆ ಬ್ಯಾಂಕ್ ದಾಖಲೆಗಳನ್ನು ನೀಡಿದ್ದಾರೆ.

ಶನಿವಾರ ನಮಗೆ ದೂರು ಸಿಕ್ಕಿದ್ದು ,ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಡಿಸಿಪಿ ಅತುಲ್ ಕುಮಾರ್ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ:ವಿಡಿಯೊ ವೈರಲ್‌: ನೆಮ್ಮದಿಯ ನಿಟ್ಟುಸಿರು ಬಿಟ್ಟ 'ಬಾಬಾ ಕಾ ದಾಬಾ'ದ ವೃದ್ಧ ದಂಪತಿ

ಪ್ರಸಾದ್ ಅವರ ಆರೋಪವನ್ನು ತಳ್ಳಿ ಹಾಕಿದ ವಾಸನ್ತಾನು ಎಲ್ಲ ಹಣವನ್ನು ಅವರಿಗೆ ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ವಿಡಿಯೊ ಚಿತ್ರೀಕರಿಸಿದ್ದು ನಾನು. ಅದುಇಷ್ಟೊಂದು ದೊಡ್ಡ ವಿಷಯ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಬಾಬಾ (ಪ್ರಸಾದ್) ಅವರಿಗೆ ಬೇರೆ ಯಾರೂ ಕಿರುಕುಳಕೊಡಬಾರದು ಎಂಬ ಉದ್ದೇಶದಿಂದ ನಾನು ನನ್ನ ಬ್ಯಾಂಕ್ ಖಾತೆ ಸಂಖ್ಯೆ ನೀಡಿದ್ದೆ ಎಂದಿದ್ದಾರೆ. ಅಕ್ಟೋಬರ್ 27 ದಿನಾಂಕ ನಮೂದು ಆಗಿರುವ₹1 ಲಕ್ಷದ ಒಂದು ಚೆಕ್, ₹2.33 ಲಕ್ಷದ ಇನ್ನೊಂದು ಚೆಕ್ ಮತ್ತು ₹45,000 ಪಾವತಿ ಮಾಡಿರುವ ಬಗ್ಗೆ ರಸೀದಿಗಳನ್ನು ವಾಸನ್ ನೀಡಿದ್ದಾರೆ. ಮೂರು ವಾರಗಳಲ್ಲಿ ಸಂಗ್ರಹವಾದ ಹಣ ಇಷ್ಟು ಎಂದು ಹೇಳಿರುವ ವಾಸನ್ ತಮ್ಮ ಬ್ಯಾಂಕ್ಖಾತೆಯಲ್ಲಿನ ಹಣದ ವಿವರಗಳನ್ನು ಫೇಸ್‌ಬುಕ್‌ನಲ್ಲಿಪೋಸ್ಟಿಸಿದ್ದಾರೆ. ಇದರ ಪ್ರಕಾರ ಮೂರು ವಾರಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಆದ ಹಣ ₹3.5 ಲಕ್ಷ ಆಗಿದೆ.ಇನ್ನೆರಡು ವ್ಯವಹಾರದ ಬಗ್ಗೆ ಕಾಂತಪ್ರಸಾದ್ ಅವರಲ್ಲಿ ಕೇಳಿದಾಗ ನನ್ನ ಕೈಯಲ್ಲಿ ಸದ್ಯ ಫೋನ್ ಇಲ್ಲ. ಹಾಗಾಗಿ ಖಾತೆಯಲ್ಲಿನ ಹಣ ಎಷ್ಟಿದೆ ಎಂದು ನೋಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ವಾಸನ್ ಅವರಿಗೆ ₹20-25 ಲಕ್ಷ ಹಣ ಸಿಕ್ಕಿದೆ ಎಂದು ಕೆಲವರು ಆರೋಪಿಸಿದ್ದು, ಈ ಆರೋಪ ಸತ್ಯಕ್ಕೆ ದೂರವಾದುದು ಎಂದಿದ್ದಾರೆ ವಾಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT