ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ಎದುರಿಸುವವರ ನೆರವಿಗೆ ಬಜರಂಗದಳದಿಂದ ಸಹಾಯವಾಣಿ

Last Updated 6 ಜುಲೈ 2022, 13:39 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ‘ಪೋಸ್ಟ್‌’ಗಾಗಿ ಇಸ್ಲಾಮಿಕ್‌ ಮೂಲಭೂತವಾದಿಗಳಿಂದ ಬೆದರಿಕೆ ಎದುರಿಸುವವರ ನೆರವಿಗಾಗಿ ಬಜರಂಗ ದಳವು ಸಹಾಯವಾಣಿ ಆರಂಭಿಸಿದೆ.

‘ಟೇಲರ್‌ ಕನ್ಹಯ್ಯ ಲಾಲ್‌ ಹಾಗೂ ಉಮೇಶ್‌ ಕೊಲ್ಹೆ ಅವರ ಹತ್ಯೆ ಇಡೀ ಜಗತ್ತನೇ ಬೆಚ್ಚಿಬೀಳಿಸಿದೆ. ಮುಸ್ಲಿಂ ಮೂಲಭೂತವಾದದ ವಿಷ ದೇಶದೆಲ್ಲೆಡೆ ವೇಗವಾಗಿ ಪಸರಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ವಾತಾವರಣ ನಿರ್ಮಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ತಿಳಿಸಿದ್ದಾರೆ.

‘ಹಿಂದೂ ಬಾಂಧವರು ತಮಗೆ ಬೆದರಿಕೆ ಕರೆಗಳು ಬಂದ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಬೇಕು. ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಬಜರಂಗದಳದ ಕಾರ್ಯಕರ್ತರು ನೊಂದವರ ನೆರವಿಗೆ ಧಾವಿಸಲಿದ್ದಾರೆ. ಬಜರಂಗದಳ ಹಾಗೂ ವಿಎಚ್‌ಪಿಯ ರಾಜ್ಯ ಘಟಕಗಳು ಶೀಘ್ರವೇ ಸಹಾಯವಾಣಿ ಸಂಖ್ಯೆ ಪ್ರಕಟಿಸಲಿವೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT