ಗುವಾಹಟಿ: ಹಿಂದೂಗಳು ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಿಸದಂತೆ ಬಜರಂಗದಳದ ಅಸ್ಸಾಂನ ಕಾಚರ್ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದೆ.

ತಮ್ಮ ಮಾತನ್ನು ಮೀರಿ ಕ್ರಿಸ್ಮಸ್ ಆಚರಿಸುವವರಿಗೆ ಥಳಿಸಲಾಗುವುದು ಎಂದು ಅದು ಬೆದರಿಕೆ ಹಾಕಿದೆ.

‘ಮೇಘಾಲಯದ ಕ್ರಿಶ್ಚಿಯನ್ ವಿದ್ಯಾರ್ಥಿ ಸಂಘಟನೆಯೂ ಕೆಲವು ಹಿಂದೂ ದೇವಸ್ಥಾನಗಳನ್ನು ಬಲವಂತವಾಗಿ ಮುಚ್ಚಿಸಿವೆ. ಅವರು ನಮ್ಮ ದೇವಸ್ಥಾನಗಳನ್ನು ಮುಚ್ಚಿಸುತ್ತಾರೆ. ಆದರೆ, ಹಿಂದೂಗಳು ಅವರ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ. ಹಿಂದೂಗಳು ಚರ್ಚ್ಗೆ ಹೋಗದಂತೆ ತಡೆಯುತ್ತೇವೆ’ ಎಂದು ಕಾಚರ್ ಜಿಲ್ಲೆಯ ಭಜರಂಗದಳದ ಪ್ರಧಾನ ಕಾರ್ಯದರ್ಶಿ ಮಿಚು ನಾಥ್ ಹೇಳಿದ್ದಾರೆ.

ಡಿಸೆಂಬರ್ 25 ರಂದು ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಲ್ಚಾರ್ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.