ನವದೆಹಲಿ: ಭಾರತ್ ಬಯೋಟೆಕ್ ಎರಡರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು 10–12 ದಿನಗಳಲ್ಲಿ ಆರಂಭಿಸಲಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್ ಹೇಳಿದ್ದಾರೆ.

'ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು (ಡಿಸಿಜಿಐ) ಕೋವ್ಯಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷ ವಯೋಮಾನದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಿದೆ. ಮುಂದಿನ 10–12 ದಿನಗಳಲ್ಲಿ ಟ್ರಯಲ್ಗಳನ್ನು ಆರಂಭಿಸಲಾಗುವುದಾಗಿ ತಿಳಿಸಲಾಗಿದೆ' ಎಂದು ಡಾ.ಪೌಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮೇ 11ರಂದು ಡಿಸಿಜಿಐ ಕೋವ್ಯಾಕ್ಸಿನ್ಗೆ ಅನುಮತಿ ಕೊಟ್ಟಿದೆ. ಕೆಲವು ಷರತ್ತುಗಳ ಜೊತೆಗೆ ಲಸಿಕೆಯ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ವಿಷಯ ತಜ್ಞರ ಸಮಿತಿಯು ಶಿಫಾರಸು ಮಾಡಿತ್ತು.

5ರಿಂದ 18 ವರ್ಷ ವಯಸ್ಸಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಆದರೆ, ಮೊದಲು ವಯಸ್ಕರಲ್ಲಿ ಲಸಿಕೆಯ ಪ್ರಭಾವದ ಕುರಿತು ದತ್ತಾಂಶ ಸಲ್ಲಿಸುವಂತೆ ಸಿಡಿಎಸ್ಸಿಒ ಸೂಚಿಸಿತ್ತು.

ಇದನ್ನೂ ಓದಿ– ಸಿಂಗಪುರದ ಹೊಸ ಕೊರೊನಾ ವೈರಸ್ ದೇಶದಲ್ಲಿ 3ನೇ ಅಲೆ ಎಬ್ಬಿಸಬಹುದು–ಕೇಜ್ರಿವಾಲ್

ಅಮೆರಿಕ ಮತ್ತು ಕೆನಡಾ ಫೈಝರ್–ಬಯೊಎನ್ಟೆಕ್ ಲಸಿಕೆಯನ್ನು 12ರಿಂದ 15 ವರ್ಷ ವಯಸ್ಸಿನವರಿಗೆ ವಿತರಿಸಲು ಸಮ್ಮತಿಸಿವೆ. ಕೆನಡಾ ಮೇ 5ರಂದು ಹಾಗೂ ಅಮೆರಿಕ ಮೇ 14ರಂದು ಮಕ್ಕಳಿಗೆ ಫೈಝರ್ ಹಾಕಲು ಅನುಮತಿ ನೀಡಿವೆ.

ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.