ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರ್‌ಭೂಮ್‌ ಹತ್ಯೆ: ರಾಜಕೀಯ ಬಣ್ಣ ಲೆಕ್ಕಿಸದೆ ಅಪರಾಧಿಗಳ ವಿರುದ್ಧ ಕ್ರಮ, ಮಮತಾ

Last Updated 23 ಮಾರ್ಚ್ 2022, 9:13 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿರ್‌ಭೂಮ್‌ ಜಿಲ್ಲೆಯ ರಾಮ್‌ಪುರಹಾಟ್‌ ಎಂಬಲ್ಲಿ ಮಂಗಳವಾರ ನಡೆದ ಹಿಂಸಾಕೃತ್ಯಕ್ಕೆ ಸಂಬಂಧಿಸಿ ಅಪರಾಧಿಗಳ ವಿರುದ್ಧ ಅವರ ರಾಜಕೀಯ ಬಣ್ಣಗಳನ್ನು ಲೆಕ್ಕಿಸದೆ ಕಠಿಣ ಕ್ರಮ ಜರುಗಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ಮಮತಾ ಹೇಳಿದರು. ಒಂದು ದಿನ ಕಳೆದರೂ ಘಟನಾ ಸ್ಥಳಕ್ಕೆ ಸಿಎಂ ಮಮತಾ ಅವರು ಭೇಟಿ ನೀಡದಿರುವ ಬಗ್ಗೆ ವಿಪಕ್ಷಗಳು ಟೀಕಿಸಿವೆ.

ರಾಮ್‌ಪುರಹಾಟ್‌ ಎಂಬಲ್ಲಿ ದುಷ್ಕರ್ಮಿಗಳು ನಸುಕಿನ ವೇಳೆ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಈ ಘಟನೆಗೆ ಕೆಲವೇ ಗಂಟೆಗಳ ಮುನ್ನ, ಸ್ಥಳೀಯ ಪಂಚಾಯಿತಿಯ ಟಿಎಂಸಿ ಮುಖಂಡನ ಹತ್ಯೆಯಾಗಿತ್ತು. ಟಿಎಂಸಿಯ ಎರಡು ಗುಂಪುಗಳ ನಡುವಣ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT