ಶುಕ್ರವಾರ, ಅಕ್ಟೋಬರ್ 7, 2022
25 °C

Video| ಬಾಲಕಿಯರ ಶಾಲೆಯ ಶೌಚಾಲಯವನ್ನು ಬರಿಗೈಲೇ ಉಜ್ಜಿ ತೊಳೆದ ಬಿಜೆಪಿ ಸಂಸದ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇವಾ:  ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಇತ್ತೀಚೆಗೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ಬಾಲಕಿಯರ ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ವಿಡಿಯೊ ವೈರಲ್‌ ಆಗಿದೆ. 

ರೇವಾ ಸಂಸದ ಮಿಶ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಅವರು ಯಾವುದೇ ಸಲಕರಣೆಗಳನ್ನು ಬಳಸದೇ ಬರಿ ಕೈಯಿಂದ ಶೌಚಾಲಯವನ್ನು ಉಜ್ಜಿ ಶುಚಿಗೊಳಿಸಿರುವುದು ದಾಖಲಾಗಿದೆ. 

ಬಿಜೆಪಿಯ ‘ಸೇವಾ ಪಖವಾಡ’ ಕಾರ್ಯಕ್ರಮದಡಿಯಲ್ಲಿ ಯುವ ಮೋರ್ಚಾ ವತಿಯಿಂದ ಖತ್ಖಾರಿ ಗ್ರಾಮದ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಮಿಶ್ರಾ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತರೊಬ್ಬರು, ‘ಸಂಸದರು, ನೀವು ನಿಜಕ್ಕೂ ಸ್ವಚ್ಛತೆಗೆ ಮನಸ್ಸು ಮಾಡಿದ್ದರೆ ಬ್ರಶ್ ಬಳಸುತ್ತಿದ್ದರು. ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ. ಇದರ ಅರ್ಥವೇನು? ಇದನ್ನೇ ಮಕ್ಕಳಿಗೂ ಕಲಿಸುತ್ತೀರಾ? ಸ್ವಚ್ಛತೆಯನ್ನೂ ಸ್ವಚ್ಛವಾಗಿ ಮಾಡಬೇಕು! ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು