ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧದ ವಾರಂಟ್ ಅನ್ನು ರದ್ದುಗೊಳಿಸಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ (ಏ.12) ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಸುನಂದಾ ಅವರ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.

ಸುನಂದಾ ಅವರು ಮಂಗಳವಾರ ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಸುನಂದಾ ಅವರ ಮನವಿಯನ್ನು ಅಂಗೀಕರಿಸಿದ್ದು, ₹15,000 ವೈಯಕ್ತಿಕ ಬಾಂಡ್ ಪಡೆದು ಜಾಮೀನು ನೀಡಿದೆ.

ಸೆಷನ್ಸ್ ನ್ಯಾಯಾಲಯವು ಶಿಲ್ಪಾ ಮತ್ತು ಸಹೋದರಿ ಶಮಿತಾ ಅವರಿಗೆ ರಿಲೀಫ್ ನೀಡಿದ್ದು, ಇದೇ ದೂರಿನ ಮೇಲೆ ಅವರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಆದರೆ ಸುನಂದಾ ವಿರುದ್ಧದ ವಿಚಾರಣೆಯನ್ನು ಮುಂದುವರಿಸಬಹುದು ಎಂದು ಹೇಳಿತ್ತು.

ಮುಂಬೈನ ಉದ್ಯಮಿ ಫರ್ಹಾದ್ ಅಮ್ರಾ ಅವರ ಬಳಿ ಪಡೆದಿದ್ದ ₹21 ಲಕ್ಷ ಸಾಲದ ಹಣವನ್ನು ಮರುಪಾವತಿ ಮಾಡದ ಆರೋಪದ ಮೇಲೆ ಸುನಂದಾ ಶೆಟ್ಟಿ ಕುಟುಂಬದ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

2015ರಲ್ಲಿ ಶಿಲ್ಪಾ ಅವರ ತಂದೆ ಸುರೇಂದ್ರ ಶೆಟ್ಟಿ, ಫರ್ಹಾದ್ ಅವರಿಂದ ಹಣ ಸಾಲ ಪಡೆದಿದ್ದರು. 2017ರ ಜನವರಿಯೊಳಗೆ ಈ ಹಣವನ್ನು ಮರುಪಾವತಿ ಮಾಡಬೇಕಾಗಿತ್ತು. ಆದರೆ, 2016ರಲ್ಲಿ ಸುರೇಂದ್ರ ನಿಧನರಾದರು. ಸಾಲ ಮರು ಪಾವತಿ ಮಾಡುವುದಕ್ಕೂ ಮುನ್ನವೇ ಸುರೇಂದ್ರ ನಿಧನರಾದ್ದರಿಂದ, ಸಾಲದ ಹೊಣೆ ಸುನಂದಾ, ಶಿಲ್ಪಾ, ಶಮಿತಾ ಅವರ ಮೇಲಿತ್ತು. ಆದರೆ, ತಾವು ಹಣ ಪಡೆದಿಲ್ಲವೆಂದು ಸಾಲ ಮರುಪಾವತಿಸಲು ನಿರಾಕರಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.