ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣದ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಸಂಸದರು

Last Updated 31 ಜನವರಿ 2022, 8:27 IST
ಅಕ್ಷರ ಗಾತ್ರ

ನವದೆಹಲಿ: ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕೆಲ ಸಂಸದರು ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಮೊದಲ ಎರಡು ಸಾಲುಗಳಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಪ್ರಮುಖ ಸಚಿವರು ಮತ್ತು ವಿವಿಧ ಪಕ್ಷಗಳ ನಾಯಕರು ದೈಹಿಕ ಅಂತರ ಕಾಪಾಡಿಕೊಂಡಿದ್ದರು. ಆದರೆ, ಆ ನಂತರದ ಸಾಲುಗಳಲ್ಲಿ ಕುಳಿತಿದ್ದ ಸಂಸದರು ದೈಹಿಕ ಅಂತರವನ್ನು ಗಾಳಿಗೆ ತೂರಿದ್ದು ಕಂಡುಬಂದಿದೆ.

ಅನೇಕ ಸಂಸದರು ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ. ಇದರಲ್ಲಿ ಹಲವು ಕೇಂದ್ರ ಸಚಿವರೂ ಸೇರಿದ್ದಾರೆ. ಐವರು ಕುಳಿತುಕೊಳ್ಳಬೇಕಾದ ಬೆಂಚ್‌ಗಳಲ್ಲಿ ಏಳು ಸಂಸದರು ಒಟ್ಟಿಗೆ ಕುಳಿತಿದ್ದರು. ಕೆಲವರು ಮಾಸ್ಕ್‌ಗಳನ್ನು ಧರಿಸದೇ ಮಾತನಾಡುತ್ತಿರುವುದು ಕಂಡುಬಂದಿದೆ.

ಸಂಸತ್ತಿನ ಬಜೆಟ್‌ ಅಧಿವೇಶನದ ಮೊದಲ ಹಂತದಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪ ಪಾಳಿ ಪದ್ಧತಿಯಲ್ಲಿ ನಡೆಯಲಿದೆ. ರಾಜ್ಯಸಭೆ ಕಲಾಪ ಬೆಳಗಿನ ಅವಧಿ ಮತ್ತು ಲೋಕಸಭೆಯ ಕಲಾಪ ಮಧ್ಯಾಹ್ನ ನಡೆಯಲಿದೆ. ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT