ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ರಾಜ್ಯಗಳ ವಿಧಾನಸಭಾ, ಲೋಕಸಭಾ ಕ್ಷೇತ್ರಗಳ ಫಲಿತಾಂಶ: ಯಾರು ಮುಂದೆ?

Last Updated 2 ನವೆಂಬರ್ 2021, 6:11 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶದ 14 ರಾಜ್ಯಗಳ 29 ವಿಧಾನಸಭೆ ಕ್ಷೇತ್ರಗಳು ಮತ್ತು ಮೂರು ಲೋಕಸಭೆ ಕ್ಷೇತ್ರಗಳಿಗೆ ಎದುರಾಗಿದ್ದ ಉಪಚುನಾವಣೆಗೆ ಅಕ್ಟೋಬರ್‌ 30ರಂದು ಮತದಾನ ನಡೆದಿತ್ತು. ಇಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಒಟ್ಟು 29 ಕ್ಷೇತ್ರಗಳಲ್ಲಿ ಬಿಜೆಪಿ 9 ಕ್ಷೇತ್ರಗಳಲ್ಲಿ ಮುಂದಿದೆ. 7ರಲ್ಲಿ ಕಾಂಗ್ರೆಸ್‌ ಮುಂದಿದೆ. ನಾಲ್ಕು ಕ್ಷೇತ್ರಗಳಲ್ಲಿ ಟಿಎಂಸಿ ಮುಂದಿದೆ.

ಆಂಧ್ರಪ್ರದೇಶದ ಒಂದು ಸ್ಥಾನದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅಸ್ಸಾಂನ ಐದು ಕ್ಷೇತ್ರಗಳ ಪೈಕಿ ಬಿಜೆಪಿ 3 ಮತ್ತು ಯುಪಿಪಿಎಲ್‌ 2 ಮುಂದೆ ಇವೆ. ಬಿಹಾರದ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಜೆಡಿಯು ಮತ್ತೊಂದರಲ್ಲಿ ಆರ್‌ಜೆಡಿ ಮೇಲುಗೈ ಸಾಧಿಸಿವೆ.

ಹರ್ಯಾಣದ ಒಂದು ಸ್ಥಾನದಲ್ಲಿ ಐಎನ್‌ಎಲ್‌ಡಿ, ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ಪೈಕಿ ಬಿಜೆಪಿ, ಕಾಂಗ್ರೆಸ್‌, ಪಕ್ಷೇತರ ಅಭ್ಯರ್ಥಿಗಳು ತಲಾ ಒಂದೊಂದರಲ್ಲಿ, ಕರ್ನಾಟಕದ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್‌ ಮುಂದೆ ಇವೆ.

ಮಹಾರಾಷ್ಟ್ರದ ಒಂದು ಸ್ಥಾನದಲ್ಲಿ ಕಾಂಗ್ರೆಸ್‌, ಮಧ್ಯಪ್ರದೇಶದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಮೇಘಾಲಯದ ಮೂರು ಕ್ಷೇತ್ರಗಳಲ್ಲಿ ಎನ್‌ಪಿಪಿ ಎರಡು, ಯುಡಿಪಿ ಒಂದು ಕ್ಷೇತ್ರ, ಮಿಜೊರಾಂನ ಒಂದು ಕ್ಷೇತ್ರದಲ್ಲಿ ಎಂಎನ್‌ಎಫ್‌, ರಾಜಸ್ಥಾನದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ತೆಲಂಗಾಣದ ಒಂದು ಕ್ಷೇತ್ರದಲ್ಲಿ ಬಿಜೆಪಿ, ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ ಪಡೆದುಕೊಂಡಿವೆ.

ಲೋಕಸಭೆ ಚುನಾವಣೆ

ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ 2,56,722 ಮತ ಪಡೆದು ಮುಂದಿದೆ. 2,48,542 ಮತ ಗಳಿಸಿರುವ ಬಿಜೆಪಿ ಅಭ್ಯರ್ಥಿ ಹಿಂದೆ ಉಳಿದಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ಬಿಜೆಪಿ (1,97,302) ಮುನ್ನಡೆ ಸಾಧಿಸಿದೆ, ಕಾಂಗ್ರೆಸ್‌ ಅಭ್ಯರ್ಥಿ (1,67,118) 30,184 ಮತಗಳ ಹಿಂದಿದ್ದಾರೆ. ದಾದ್ರಾ ಮತ್ತು ನಗರ ಹವೇಲಿಯಲ್ಲಿ ಶಿವಸೇನೆಯ ಅಭ್ಯರ್ಥಿ (34,162) 8,563 ಮತಗಳ ಮುಂದಿದ್ದಾರೆ. ಬಿಜೆಪಿ ಅಭ್ಯರ್ಥಿ 25,599 ಮತ ಗಳಿಸಿ ಹಿಂದುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT