ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪೂರ್ಣ ಫಲಿತಾಂಶ ಇಲ್ಲಿದೆ

Last Updated 6 ನವೆಂಬರ್ 2022, 14:51 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆರು ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಗೆದ್ದು ಬೀಗಿದೆ. ಇನ್ನುಳಿದಂತೆ ಟಿಆರ್‌ಎಸ್‌, ಆರ್‌ಜೆಡಿ ಮತ್ತು ಶಿವಸೇನಾ (ಉದ್ಧವ ಠಾಕ್ರೆ ಬಣ) ತಲಾ ಒಂದೊಂದು ಸ್ಥಾನದಲ್ಲಿ ಗೆದ್ದಿವೆ.

ಉತ್ತರ ಪ್ರದೇಶ
ಗೋಲಾ ಗೋಕರ್ಣನಾಥ– ಬಿಜೆಪಿ
ಆಡಳಿತಾರೂಢ ಬಿಜೆಪಿಯ ಅಮನ್‌ ಗಿರಿ ಅವರು 1,24,810 ಮತ ಪಡೆದು ಸಮಾಜವಾದಿ ಪಕ್ಷ (ಎಸ್‌ಪಿ)ದ ವಿನಯ್‌ ತಿವಾರಿ ಅವರನ್ನು ಮಣಿಸಿದ್ದಾರೆ. ತಿವಾರಿ ಅವರು 90,512 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 34,298 ಮತಗಳಾಗಿವೆ.

ತೆಲಂಗಾಣ
ಮುನುಗೋಡು – ಟಿಆರ್‌ಎಸ್‌
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಅವರು ಮುನುಗೋಡು ಉಪ ಚುನಾವಣೆಯಲ್ಲಿ 97,006 ಮತ ಪಡೆದಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೋಮಟಿ ರೆಡ್ಡಿ ರಾಜಗೋಪಾಲ ರೆಡ್ಡಿ ಅವರು 86,697 ಮತಗಳನ್ನು ಪಡೆದು ಸೋತಿದ್ದಾರೆ. ಇಬ್ಬರ ನಡುವಿನ ಮತಗಳ ಅಂತರ 10,309 ಆಗಿದೆ.

ಮಹಾರಾಷ್ಟ್ರ
ಅಂಧೇರಿ ಪೂರ್ವ – ಉದ್ಧವ್‌ ಠಾಕ್ರೆ ಬಣ
ಮುಂಬೈನ ಅಂಧೇರಿ ಪೂರ್ವ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನಾ ಆಭ್ಯರ್ಥಿ ರುತುಜಾ ರಮೇಶ್‌ ಲಟ್ಕೆ ಅವರು 66,530 ಮತ ಗಳಿಸಿದ್ದಾರೆ. ಈ ಮೂಲಕ ಅವರು ಪಕ್ಷೇತರ ಅಭ್ಯರ್ಥಿ ಬಾಲ ವೆಂಕಟೇಶ್‌ ವಿನಾಯಕ್‌ ನಾಡಾರ್‌ ಅವರ(1506) ವಿರುದ್ಧ ಬರೊಬ್ಬರಿ 65,024 ಮತಗಳ ಭಾರಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯು ತನ್ನ ಜಂಟಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿತ್ತು.

ಹರಿಯಾಣ
ಅದಮ್‌ಪುರ–ಬಿಜೆಪಿ
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭವ್ಯ ಬಿಷ್ಣೋಯ್‌ ಅವರು 67,492 ಮತಗಳನ್ನು ಗಳಿಸಿದ್ದು, ಕಾಂಗ್ರೆಸ್‌ನ ಜೈಪ್ರಕಾಶ್‌ (51,752) ಅವರನ್ನು 15,740 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಿಹಾರ
ಗೋಪಾಲ್‌ ಗಂಜ್‌ – ಬಿಜೆಪಿ
ಬಿಜೆಪಿಯ ಕುಸುಮ್‌ ದೇವಿ ಅವರು 70,053 ಮತಗಳನ್ನು ಪಡೆದು, ತಮ್ಮ ಸಮೀಪ ಸ್ಪರ್ಧಿ, ಆರ್‌ಜೆಡಿಯ ಮೋಹನ್‌ ಪ್ರಸಾದ್‌ ಗುಪ್ತಾ (68,259) ಅವರನ್ನು 1,794 ಮತಗಳಿಂದ ಸೋಲಿಸಿದ್ದಾರೆ.

ಮೊಕಾಮ– ಆರ್‌ಜೆಡಿ
ಆರ್‌ಜೆಡಿಯ ನೀಲಂ ದೇವಿ ಅವರು 79,744 ಮತಗಳನ್ನು ಗಳಿಸಿದ್ದು, ಬಿಜೆಪಿಯ ಸೋನಮ್‌ ದೇವಿ(63,003) ಅವರನ್ನು 16,741 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಒಡಿಶಾ
ಧಾಮ್‌ನಗರ್‌– ಬಿಜೆಪಿ
ಬಿಜೆಪಿಯ ಸೂರ್ಯವಂಶಿ ಸೂರಜ್‌ ಅವರು 80,351 ಮತಗಳನ್ನು ಪಡೆದು, ಬಿಜು ಜನತಾದಳದ ಅವಂತಿ ದಾಸ್‌ (70,470) ಅವರನ್ನು 9,881 ಅಂತರದಿಂದ ಮಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT