ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ರೋಡ್ ಶೋ ವೇಳೆ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಕೋಪದಿಂದ ವರ್ತಿಸುತ್ತಿರುವ ವಿಡಿಯೊವೊಂದನ್ನು ಬಿಜೆಪಿ ಹಂಚಿಕೊಂಡಿದೆ. ಪಕ್ಷದ ಪರವಾಗಿ ಒಂದು ಗಂಟೆಗೂ ಹೆಚ್ಚುಕಾಲ ಪ್ರಚಾರ ನಡೆಸಿದ ನುಸ್ರತ್ ಜಹಾನ್ ಅವರು, ಮುಖಂಡರ ಮೇಲೆ ರೇಗಾಡಿರುವುದು ವಿಡಿಯೊದಲ್ಲಿದೆ.

'ನಾನು ಒಂದು ಗಂಟೆಗೂ ಹೆಚ್ಚು ಕಾಲದಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಮುಖ್ಯಮಂತ್ರಿಯವರಿಗೂ ಇಷ್ಟು ದೀರ್ಘ ಕಾಲ ನಾನು ಪ್ರಚಾರ ಮಾಡುವುದಿಲ್ಲ,' ಎಂದು ಜಹಾನ್ ಆಕ್ರೋಶದಿಂದ ಹೇಳಿರುವ ವಿಡಿಯೊ ಸದ್ಯ ವೈರಲ್ ಆಗಿದೆ.

ವಾಹನವೊಂದರಲ್ಲಿ ನಿಂತಿರುವ ಸಂಸದೆ ನುಸ್ರತ್ ಜಹಾನ್ ಇನ್ನು ಪ್ರಚಾರ ನಡೆಸಲು ಇನ್ನು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮುಖ್ಯರಸ್ತೆ ವರೆಗೆ ಪ್ರಚಾರ ನಡೆಸುವಂತೆ ಕೋರುವ ಮುಖಂಡರ ಕೋರಿಕೆಯನ್ನೂ ಅವರು ನಿರಾಕರಿಸುತ್ತಿರುವುದನ್ನು ಬಿಜೆಪಿ ಟ್ವೀಟ್ ಮಾಡಿರುವ 25 ಸೆಕೆಂಡ್‌ಗಳ ವಿಡಿಯೊದಲ್ಲಿ ಕಾಣಬಹುದು.

'ಮುಖ್ಯ ರಸ್ತೆ ಸಮೀಪದಲ್ಲೇ ಇದೆ. ಇಲ್ಲಿಂದ ಕೇವಲ ಅರ್ಧ ಕಿಲೋಮೀಟರ್ ದೂರವಷ್ಟೆ,' ಎಂದು ಮುಖಂಡರೊಬ್ಬರು ಜಹಾನ್ ಅವರನ್ನು ಕೋರುತ್ತಾರೆ. ಜಹಾನ್ ಪ್ರಚಾರಕ್ಕೆ ನಿರಾಕರಿಸುತ್ತಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 1ರಂದು ನಡೆಯಲಿದೆ. ಅಲ್ಲಿ ಒಟ್ಟು 8 ಹಂತಗಳ ಚುನಾವಣೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.