ಪಶ್ಚಿಮ ಬಂಗಾಳ: ಕಾಲೇಜು ಅರ್ಹತಾಪಟ್ಟಿಯಲ್ಲಿ ಕಾರ್ಟೂನ್ ಪಾತ್ರ ‘ಶಿಂಚಾನ್’ ಹೆಸರು

ಕೋಲ್ಕತ್ತ: ಪಶ್ಚಿಮ ಬಂಗಾಳದ ಕಾಲೇಜೊಂದರ ಅರ್ಹತಾ ಪಟ್ಟಿಯಲ್ಲಿ ಜಪಾನಿನ ಕಾರ್ಟೂನ್ ಪಾತ್ರ ಶಿಂಚಾನ್ ನೊಹರಾ ಹೆಸರು ಕಾಣಿಸಿಕೊಂಡಿದೆ.
ಉತ್ತರ ಬಂಗಾಳದ ಸಿಲಿಗುರಿ ಕಾಲೇಜಿನ ಬಿಎಸ್‌ಸಿ ವಿಭಾಗದ ಅರ್ಹತಾ ಪಟ್ಟಿಯಲ್ಲಿ ಶಿಂಚಾನ್ ಹೆಸರು ಕಾಣಿಸಿಕೊಂಡಿದೆ. ಈಗಾಗಲೇ ಶಿಂಚಾನ್ ಹೆಸರನ್ನು ಅರ್ಹತಾ ಪಟ್ಟಿಯಿಂದ ಕಿತ್ತು ಹಾಕಲಾಗಿದ್ದು, ಕಾಲೇಜು ವೆಬ್‌ಸೈಟ್‌ನಲ್ಲಿ ಹೊಸ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಲ್ಲದೇ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಆನ್‌ಲೈನ್ ಅರ್ಜಿಯಲ್ಲಿ ವಿದ್ಯಾರ್ಥಿಗಳು ನೀಡಿದ ಮಾಹಿತಿಗಳ ಆಧಾರದಲ್ಲಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವಂತೆ ಕಾಲೇಜು ಆಡಳಿತವು ಹೊರಗಿನ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಈ ಬಳಿಕ ಕಾಲೇಜು ಆಡಳಿವು ಅರ್ಹತಾ ಪಟ್ಟಿಯನ್ನು ಪರಿಶೀಲಿಸುತ್ತದೆ. ಈ ವೇಳೆ ಶಿಂಚಾನ್ ಹೆಸರು ಅರ್ಹತಾ ಪಟ್ಟಿಯಲ್ಲಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.
ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಹೆಸರು ಮೂರು ಕಾಲೇಜಿನ ಅರ್ಹತಾ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಮಾನ್ಕಚಕ್ ಕಾಲೇಜಿನ ಅರ್ಹತಾ ಪಟ್ಟಿಯಲ್ಲಿ ಗಾಯಕಿ ನೇಹಾ ಕಕ್ಕರ್ ಅವರ ಹೆಸರು ಕಾಣಿಸಿಕೊಂಡಿತ್ತು. ಈ ಸಂಬಂಧ ನಾಲ್ಕು ಕಾಲೇಜುಗಳು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.