ಬುಧವಾರ, ಸೆಪ್ಟೆಂಬರ್ 30, 2020
25 °C

ಸತತ ಮೂರನೇ ದಿನ ರಿಯಾ ತಂದೆ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಸುಶಾಂತ್ ಸಿಂಗ್ ರಜಪೂತ್

ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ತಂದೆಯು ಗುರುವಾರ ಸತತ ಮೂರನೇ ದಿನ ಸಿಬಿಐ ವಿಚಾರಣೆಗೆ ಹಾಜರಾದರು. ಇಲ್ಲಿನ ಡಿಆರ್‌ಡಿಒ ಅತಿಥಿಗೃಹದಲ್ಲಿ ಇರುವ ಸಿಬಿಐ ಕಚೇರಿಯಲ್ಲಿ ನಟ ಸುಶಾಂತ್ ಸಾವಿನ ಪ್ರಕರಣ ಕುರಿತು ವಿಚಾರಣೆಯು ನಡೆಯುತ್ತಿದೆ. ಕಳೆದ ಎರಡು ದಿನ ಸುಮಾರು 18 ಗಂಟೆ ಕಾಲ ಅವರ ವಿಚಾರಣೆ ನಡೆದಿದೆ.

ಅವರು ಗುರುವಾರ ಪೊಲೀಸ್ ಬೆಂಗಾವಲಿನಲ್ಲಿ ಸಿಬಿಐ ಕಚೇರಿಗೆ ಆಗಮಿಸಿದರು. ಪ್ರಕರಣದ ಮುಖ್ಯ ಆರೋಪಿಯಾಗಿರುವ ನಟಿ ರಿಯಾ ಅವರನ್ನು ಗುರುವಾರವೂ ವಿಚಾರಣೆಗೆ ಕರೆಸಿರಲಿಲ್ಲ. ನಟ ಸುಶಾಂತ್ ಆತ್ಮಹತ್ಯೆ ಪ್ರಕಣದಲ್ಲಿ ರಿಯಾ ಮತ್ತು ಅವರ ಕುಟುಂಬ ಸದಸ್ಯರ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ಈ ಮುನ್ನ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ಸುಮಾರು 50 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಆದರೆ, ಸುಶಾಂತ್ ತಂದೆ ಬಿಹಾರದಲ್ಲಿ ದೂರು ದಾಖಲಿಸಿದ ನಂತರ ತನಿಖೆಯ ಹೊಣೆ ಹೊತ್ತುಕೊಂಡಿರುವ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು