ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊ ಹಂಚಿಕೆ: ದೆಹಲಿಯಲ್ಲಿ ಸಿಬಿಐ ಶೋಧ

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ(ಸಿಎಸ್‌ಎಎಂ) ಸಂಬಂಧಿಸಿದ ಆಡಿಯೊ, ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ದೇಶದ ಹಲವೆಡೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ನಡೆಸಿದೆ.
ಇಂಟರ್‌ಪೋಲ್ ಘಟಕದ ಮಾಹಿತಿ ಆಧರಿಸಿ ದೆಹಲಿ, ತಿರುಚಿರಾಪಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಪರೇಷನ್ 'ಮೇಘ ಚಕ್ರ'ದ ಭಾಗವಾಗಿ ಸೆಪ್ಟೆಂಬರ್‌ನಲ್ಲಿ ಸಿಬಿಐ ಶೋಧ ನಡೆಸಿತ್ತು. ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಸಿಎಸ್‌ಎಎಂ ದಂಧೆ ನಡೆಸುತ್ತಿದ್ದ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷ ನಡೆದ ಆಪರೇಷನ್ ಕಾರ್ಬನ್ ದಾಳಿ ಸಮಯದಲ್ಲಿ ಪಡೆದ ಗುಪ್ತಚರ ಮಾಹಿತಿ ಮತ್ತು ಸಿಂಗಾಪುರದ ಇಂಟರ್‌ಪೋಲ್ ಮಾಹಿತಿ ಆಧರಿಸಿ ಈ ದಾಳಿ ನಡೆದಿತ್ತು.
ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೊ-ದೃಶ್ಯಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು.
ಓದಿ... ‘ಚೈಲ್ಡ್ ಪೋರ್ನ್’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್ಟಾಪ್ಗಳು ವಶಕ್ಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.