ಹೈದರಾಬಾದ್: ‘ತಾನು ಅಭಿವೃದ್ಧಿಪಡಿಸಿರುವ ಒಣ ಸ್ವ್ಯಾಬ್ ಸಂಗ್ರಹ ತಂತ್ರಜ್ಞಾನವು ಕೋವಿಡ್–19 ಪರೀಕ್ಷೆಯ ಸಮಯ ಮತ್ತು ವೆಚ್ಚದಲ್ಲಿ ಶೇ 50ರಷ್ಟು ಉಳಿತಾಯ ಮಾಡಬಲ್ಲದು. ಈ ತಂತ್ರಜ್ಞಾನಕ್ಕೆ ಈಗ ಐಸಿಎಂಆರ್‌ನ ಮಾನ್ಯತೆಯೂ ಲಭಿಸಿದೆ’ ಎಂದು ಇಲ್ಲಿನ ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮಾಲೆಕ್ಯೂಲರ್ ಬಯಾಲಜಿ (ಸಿಎಸ್‌ಐಆರ್) ಸಂಸ್ಥೆ ಹೇಳಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ, ಸೋಂಕಿತರ ಮೂಗು ಅಥವಾ ಬಾಯಿಯಿಂದ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಂ (ವಿಟಿಎಂ) ದ್ರಾವಣದಲ್ಲಿ ಭದ್ರವಾಗಿಟ್ಟು ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ದ್ರಾವಣವು ಸೋರಿಕೆಯಾಗದಂತೆ, ಈ ಮಾದರಿಗಳನ್ನು ವಿಶೇಷ ರೀತಿಯಲ್ಲಿ ಪ್ಯಾಕ್ ಮಾಡಬೇಕಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಹಾಗೂ ವೆಚ್ಚ ತಗಲುತ್ತದೆ. ಸಿಎಸ್‌ಐಆರ್ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದಲ್ಲಿ ಸೋಂಕಿತದ ಮಾದರಿಗಳನ್ನು ದ್ರಾವಣದಲ್ಲಿಟ್ಟು ರವಾನಿಸಬೇಕಾಗಿಲ್ಲ. ಇದರಿಂದಗಿ ಪ್ಯಾಕೇಜ್‌ಗೆ ತಗಲುವ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.