ಗುರುವಾರ , ಜೂನ್ 30, 2022
23 °C

ಇಂಧನದ ಮೇಲಿನ ಸೆಸ್, ಹೆಚ್ಚುವರಿ ಶುಲ್ಕ ತೆಗೆಯಿರಿ: ಕೇಂದ್ರಕ್ಕೆ ತಮಿಳುನಾಡು ಆಗ್ರಹ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಬೇಕು. ಹೀಗೆ ಮಾಡಿದರೆ 2014ರಲ್ಲಿದ್ದಂತೆ ಇಂಧನ ದರ ಇಳಿಕೆಯಾಗುತ್ತದೆ. ಇದು ಸರಳ ಮತ್ತು ನ್ಯಾಯೋಚಿತ’ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಗುರುವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ.

‘ವಿಧಿಸಲಾಗುತ್ತಿರುವ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ಕಡಿಮೆ ಮಾಡಲು ಮತ್ತು ಅವುಗಳನ್ನು ಮೂಲ ತೆರಿಗೆ ದರಗಳೊಂದಿಗೆ ವಿಲೀನಗೊಳಿಸಲು ನಾವು (ತಮಿಳುನಾಡು) ಕೇಂದ್ರ ಸರ್ಕಾರವನ್ನು ಪದೇ ಪದೇ ಒತ್ತಾಯಿಸಿದೆ. ಹೀಗೆ ಮಾಡಿದರೆ, ರಾಜ್ಯಗಳೂ ಸೂಕ್ತ ಪಾಲು ಪಡೆಯಬಹುದು’ ಎಂದು ತ್ಯಾಗರಾಜನ್ ಹೇಳಿದರು.

‘ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲಿಂದ ಇಳಿಸಲು ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕವನ್ನು ಇಳಿಸಿತ್ತು. ರಾಜ್ಯಗಳೂ ತಮ್ಮ ಪಾಲಿನ ತೆರಿಗೆಯನ್ನು ಕಡಿತ ಮಾಡುವಂತೆ ಕೋರಿಕೊಂಡಿದ್ದೆವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡಿದ್ದವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡದೆ, ಅದರ ಲಾಭವನ್ನು ಜನರಿಗೆ ನೀಡಿಲ್ಲ. ಈ ಮೂಲಕ, ಆ ರಾಜ್ಯಗಳು ತಮ್ಮ ನಾಗರಿಕರಿಗೆ ಅನ್ಯಾಯ ಮಾಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅರೋಪಿಸಿದ್ದರು.

'ಕೇಂದ್ರ ಸರ್ಕಾರದ ತೆರಿಗೆಗಳು ಈಗಾಗಲೇ ಮಿತಿ ಮೀರಿವೆ. ಆದರೂ, ರಾಜ್ಯಗಳು ವಿಧಿಸುವ ತೆರಿಗೆಗಳನ್ನು ಮತ್ತಷ್ಟು ಕಡಿಮೆ ಮಾಡಬೇಕು ಎನ್ನುವುದು ನ್ಯಾಯಯುತವೂ ಅಲ್ಲ, ಕಾರ್ಯಸಾಧುವೂ ಅಲ್ಲ’ ಎಂದು ತ್ಯಾಗರಾಜನ್‌ ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು