ಮಂಗಳವಾರ, ಆಗಸ್ಟ್ 3, 2021
22 °C

ರೈತರ ಪ್ರತಿಭಟನೆ ಕಾವನ್ನು ಸರ್ಕಾರ ಸಾಂಕ್ರಾಮಿಕದತ್ತ ತಿರುಗಿಸುತ್ತಿದೆ: ಚಿದಂಬರಂ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತರ ಪ್ರತಿಭಟನೆಯ ಕಾವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಸದ್ಯದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ.

ಸರ್ಕಾರದ ಈ ನಡೆಯು ಸಾಂಕ್ರಾಮಿಕ ರೋಗದ ಮಧ್ಯೆಯು ಆಂದೋಲನವನ್ನು ದೀರ್ಘಕಾಲದವರೆಗೆ ಇರುವಂತೆ ಮಾಡುತ್ತಿದೆ. ಈ ಸರ್ಕಾರವು ನಿಜವಾಗಿಯೂ ಜನರ ಸೇವಕರಾಗಿದ್ದರೆ ಸಾರ್ವಜನಿಕರ ಅಭಿಪ್ರಾಯದತ್ತ ಗಮನ ಹರಿಸಬೇಕು. 'ರೈತರ ಪ್ರತಿಭಟನೆಯು 6 ತಿಂಗಳು ಪೂರೈಸಿರುವಂತೆಯೇ, ಸರ್ಕಾರವು ಸಾಂಕ್ರಾಮಿಕ ರೋಗವನ್ನು ಮುಂದಿಟ್ಟುಕೊಂಡು ತನ್ನ ಪರವಾಗಿ ಗಮನ ತಿರುಗಿಸಲು ಬಳಸುತ್ತಿದೆ' ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗದ ಮಧ್ಯೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ದೀರ್ಘಗೊಳಿಸುತ್ತಿರುವುದು ಸ್ಪಷ್ಟವಾಗಿದೆ. ವಿವಾದಾತ್ಮಕ ಕಾನೂನುಗಳನ್ನು ಬದಲಾಯಿಸಲು ರೈತರು ನಿರ್ಧರಿಸಿದರೆ, ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವು ಜನರ ಸೇವಕನಾಗಿದ್ದರೆ, ಅದು ಸಾರ್ವಜನಿಕರ ಅಭಿಪ್ರಾಯವನ್ನು ಗಮನಿಸಬೇಕು, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಹೊಸ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು' ಎಂದಿದ್ದಾರೆ.

ಕಳೆದ ನವೆಂಬರ್ 26ರಿಂದಲೂ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 16 ರಂದು, ಗಾಜಿಯಾಬಾದ್‌ನ ರೈತರು ಪ್ರತಿಭಟನೆಯು ಆರು ತಿಂಗಳ ಪೂರ್ಣಗೊಂಡಿದ್ದಕ್ಕಾಗಿ 'ಕರಾಳ ದಿನ'ವನ್ನಾಗಿ ಆಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು