ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಸ ಪರ್ವತ ಶ್ರೇಣಿ ಮೇಲೆ ಕಣ್ಣಿಡಲು ಮಾನವರಹಿತ ವಿಮಾನದ ಪರೀಕ್ಷೆ ನಡೆಸಿದ ಚೀನಾ

ಅಕ್ಷರ ಗಾತ್ರ

ದೆಹಲಿ: ಭಾರತ-ಚೀನಾ ಗಡಿಯಲ್ಲಿ ವ್ಯೂಹಾತ್ಮಕ ಪ್ರಾಧಾನ್ಯತೆ ಪಡೆದಿರುವ ಕೈಲಾಸ ಪರ್ವತ ಶ್ರೇಣಿಯ ಮೇಲೆ ನಿಗಾ ವಹಿಸಲೆಂದೇ ಅಭಿವೃದ್ಧಿಪಡಿಸಲಾಗಿರುವ ಮಾನವ ರಹಿತ ವೈಮಾನಿಕ ವಾಹನ ( ಯುಎವಿ)ವನ್ನು ಚೀನಾ ಪರೀಕ್ಷೆ ಮಾಡಿದೆ ಎಂದು ವರದಿಯಾಗಿದೆ.

ಚೀನಾದ ಶಾನ್‌ಕ್ಸಿ ಎಂಬಲ್ಲಿ ಈ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಟಿಬೆಟ್ ಸ್ವಾಯತ್ತ ಪ್ರದೇಶವಾದ ಗಾರ್ ಗುನ್ಸಾ ಎಂಬಲ್ಲಿ ವಿಮಾನದ ನಿಯಂತ್ರಣವಿತ್ತು. ಈ ಕಾರ್ಯವನ್ನು 'ಹೈಲನ್‌ ಏವಿಯೇಷನ್' ತಂಡವು ನಿರ್ವಹಿಸಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

ಬಾಗಾ ನಗರದಲ್ಲಿ 4700 ಮೀಟರ್‌ಗಳ ಎತ್ತರದಿಂದ ಹಾರಾಟ ಆರಂಭಿಸಿದ ವಿಮಾನ, ಕೈಲಾಸ ಪರ್ವತ ಶ್ರೇಣಿಯಲ್ಲಿ ಯಶಸ್ವಿ ಹಾರಾಟ, ಪಹರೆ ನಡೆಸಿದೆ ಎಂದು ಸುದ್ದಿ ಸಂಸ್ಥೆ ಪ್ರಕಟಿಸಿದೆ.

ಗಾಲ್ವಾನ್‌ ಕಣಿವೆಯಲ್ಲಿನ ಎರಡೂ ದೇಶಗಳ ಸೇನಾ ಸಂಘರ್ಷದ ನಂತರದ ದಿನಗಳಲ್ಲಿ ಭಾರತವು ಕೈಲಾಸ ಪರ್ವತ ಶ್ರೇಣಿಯ ಹಲವು ಶಿಖರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಚೀನಾ ಸೇನೆಯ ಚಲನವಲನಗಳನ್ನು ಗಮನಿಸುವುದು ಭಾರತೀಯ ಸೇನಾ ಪಡೆಯ ಮುಖ್ಯ ಉದ್ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ಕೈಲಾಸ ಪರ್ವತ ಶ್ರೇಣಿಯು ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿದೆ. ಇದರ ಮೇಲೆ ಗಸ್ತು ನಡೆಸಲು ಚೀನಾ ಮಾನವರಹಿತ ವಿಮಾನವನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT