ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಬೇಕಿದೆ ಕಾಯಕಲ್ಪ: ಸಿಬಲ್‌

Last Updated 13 ಜೂನ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ‘ತಾನು ಜಡಪಕ್ಷವಲ್ಲ, ಬಿಜೆಪಿಗೆ ಪರ್ಯಾಯವಾದ ಪ್ರಬಲ ರಾಜಕೀಯ ಪಕ್ಷ ಎಂಬುದನ್ನು ಸಾಬೀತುಪಡಿಸಬೇಕಾದರೆ, ಸಂಘಟನಾತ್ಮಕವಾಗಿ ಎಲ್ಲಾ ಹಂತಗಳಲ್ಲೂ ಕಾಂಗ್ರೆಸ್‌ವ್ಯಾಪಕವಾದ ಸುಧಾರಣೆಗಳನ್ನು ಮಾಡಬೇಕಾಗಿದೆ’ ಎಂದು ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್‌ ಹೇಳಿದ್ದಾರೆ.

‘ಭಾರತಕ್ಕೆ ಪುನರುತ್ಥಾನಗೊಂಡ ಕಾಂಗ್ರೆಸ್‌ನ ಅಗತ್ಯವಿದೆ. ಅದಕ್ಕೆ ಪಕ್ಷವು ಸಕ್ರಿಯವಾಗಿ, ಜಾಗೃತವಾಗಿ ಮತ್ತು ಅರ್ಥಪೂರ್ಣ ರೀತಿಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಹಾಗಾಗಬೇಕಾದರೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಲೇಬೇಕು’ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಕಾಂಗ್ರೆಸ್‌ ಇದರ ಲಾಭ ಪಡೆಯಬಹುದು ಎಂದಿದ್ದಾರೆ.

ರಾಷ್ಟ್ರಹಿತದ ದೃಷ್ಟಿಯಿಂದ, ಪರ್ಯಾಯ ಮಾರ್ಗಸೂಚಿಯನ್ನು ರೂಪಿಸುವ ಹೊಣೆಯನ್ನು ಕಾಂಗ್ರೆಸ್‌ ಸ್ವತಃ ಹೊರಬೇಕಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಎನ್‌ಸಿಪಿಮುಖಂಡ ಶರದ್‌ ಪವಾರ್‌ ಅವರನ್ನು ಶನಿವಾರ ಭೇಟಿಯಾಗಿ ಚರ್ಚಿಸಿದ್ದಾರೆ. ದೇಶದಲ್ಲಿ ತೃತೀಯ ರಂಗ ರಚಿಸುವ ಬಗ್ಗೆ ಅವರು ಚರ್ಚಿಸಿದ್ದಾರೆಎಂಬ ಹಾಪೋಹಗಳೂ ಹುಟ್ಟಿಕೊಂಡಿವೆ. ಈ ಕಾರಣದಿಂದ ಸಿಬಲ್‌ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಪಕ್ಷದಲ್ಲಿ ರಚನಾತ್ಮಕ ಬದಲಾವಣೆಗಳಾಗಬೇಕು ಎಂದು ಒತ್ತಾಯಿಸಿ ಕಳೆದ ವರ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಪಕ್ಷದ ಹಿರಿಯ 23 ನಾಯಕರಲ್ಲಿ (ಜಿ–23 ಗುಂಪು) ಸಿಬಲ್‌ ಸಹ ಒಬ್ಬರಾಗಿದ್ದರು.

ವಾಸ್ತವ ಮನಗಾಣಲಿಲ್ಲ: ಕೋಮುವಾದವುಅಲ್ಪಸಂಖ್ಯಾತರದ್ದಿರಲೀ ಬಹುಸಂಖ್ಯಾತರದ್ದಿರಲೀ ಎರಡೂ ದೇಶಕ್ಕೆ ಅಪಾಯಕಾರಿ ಎಂಬ ವಾಸ್ತವವನ್ನು ಮನಗಾಣುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಪಕ್ಷದ ಈಚಿನ ಸೋಲುಗಳಿಗೆ ಇದೇ ಕಾರಣ ಎಂದು ಸಿಬಲ್‌ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯ ನಂತರ, ಸೋಲಿನ ಕಾರಣ ತಿಳಿಯಲು ಎ.ಕೆ. ಆ್ಯಂಟನಿ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಕೋಮುವಾದ ವಿರುದ್ಧ ಜಾತ್ಯತೀತತೆ ಎಂಬ ಆಧಾರದಲ್ಲಿ ಚುನಾವಣೆಯನ್ನು ಎದುರಿಸಿದ್ದರಿಂದ, ‘ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರವಾದ ಪಕ್ಷ’ ಎಂಬ ಭಾವನೆ ಮೂಡಿತು. ಇದರಿಂದಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಸಮಿತಿ ತಿಳಿಸಿತ್ತು.

ಸಿಬಲ್‌ ಹೇಳಿದ್ದು...

* ಕೋವಿಡ್‌ ಕಾರಣಕ್ಕೆ ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ಮುಂದೂಡಲಾಗಿದೆ. ಸದ್ಯದಲ್ಲೇ ಅವು ನಡೆಯುವುದೆಂಬ ವಿಶ್ವಾಸವಿದೆ

* ಅಸ್ಸಾಂನಲ್ಲಿ ಎಐಯುಡಿಎಫ್‌ ಹಾಗೂ ಪಶ್ಚಿಮ ಬಂಗಾಳದಲ್ಲಿ ಐಎಸ್‌ಎಫ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಸರಿಯಾಗಿ ಯೋಚಿಸಿ ಕೈಗೊಂಡ ನಿರ್ಧಾರವಲ್ಲ

* ಪಕ್ಷದಲ್ಲಿ ಅನುಭವಿಗಳು ಮತ್ತು ಯುವಕರ ಮಧ್ಯೆ ಒಂದು ಸಮತೋಲನವನ್ನು ಕಾಯ್ದುಕೊಳ್ಳುವುದು ತುರ್ತು ಅಗತ್ಯ. ಇಲ್ಲದಿದ್ದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್‌ ಪ್ರಸಾದ ಅವರಂತೆ ಯುವಕರು ಪಕ್ಷದಿಂದ ದೂರವಾಗಬಹುದು

* ಸರ್ಕಾರದ ವೈಫಲ್ಯಗಳನ್ನು ಮುಂದು ಮಾಡಿಕೊಂಡು, ಚುನಾವಣೆಯ ನೀತಿ ರೂಪಿಸಲು ಪಕ್ಷವು ಸರಿಯಾದ ವ್ಯಕ್ತಿಗಳನ್ನು ನಿಯೋಜಿಸುವುದು ಅಗತ್ಯ

* ಬಲಿಷ್ಠ ಪ್ರತಿಪಕ್ಷ ಇದ್ದರೆ ಬಿಜೆಪಿಯು ಚುನಾವಣೆಗಳಲ್ಲಿ ಸೋಲಬಲ್ಲದು ಎಂಬುದು ಈಚಿನ ಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳ ಗೆಲುವಿನಿಂದ ಸಾಬೀತಾಗಿದೆ

* ದೇಶದಲ್ಲಿ ಈಗ ಪ್ರಬಲ ಪ್ರತಿಪಕ್ಷದ ಕೊರತೆ ಎದ್ದುಕಾಣುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷವನ್ನು ಪುನಾರಚಿಸಬೇಕು ಎಂದು ನಾನು ಸಲಹೆ ನೀಡಿದ್ದೆ. ಇದರಿಂದ ಏನಾಗಬಹುದು ಎಂಬುದನ್ನು ನಾನು ಈಗಲೇ ಹೇಳಲಾರೆ. ಆದರೆ, ತಮಗೆ ಯಾವುದರಿಂದ ಒಳಿತಾಗುತ್ತದೆ ಎಂಬುದನ್ನು ದೇಶದ ಜನರೇ ತೀರ್ಮಾನಿಸುತ್ತಾರೆ

‘ವಾಸ್ತವ ಮನಗಾಣಲಿಲ್ಲ’

ಕೋಮುವಾದವು ಅಲ್ಪಸಂಖ್ಯಾತರದ್ದಿರಲೀ ಬಹುಸಂಖ್ಯಾತರದ್ದಿರಲೀ ಎರಡೂ ದೇಶಕ್ಕೆ ಅಪಾಯಕಾರಿ ಎಂಬ ವಾಸ್ತವವನ್ನು ಮನಗಾಣುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಪಕ್ಷದ ಈಚಿನ ಸೋಲುಗಳಿಗೆ ಇದೇ ಕಾರಣ ಎಂದು ಸಿಬಲ್‌ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯ ನಂತರ, ಸೋಲಿನ ಕಾರಣ ತಿಳಿಯಲು ಎ.ಕೆ. ಆ್ಯಂಟನಿ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಕೋಮುವಾದ ವಿರುದ್ಧ ಜಾತ್ಯತೀತತೆ ಎಂಬ ಆಧಾರದಲ್ಲಿ ಚುನಾವಣೆಯನ್ನು ಎದುರಿಸಿದ್ದರಿಂದ, ‘ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರವಾದ ಪಕ್ಷ’ ಎಂಬ ಭಾವನೆ ಮೂಡಿತು. ಇದರಿಂದಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಸಮಿತಿ ತಿಳಿಸಿತ್ತು.

ಇತ್ತೀಚಿನ ಚುನಾವಣೆಯಲ್ಲಿ ಎಐಯುಡಿಎಫ್‌ ಹಾಗೂ ಐಎಸ್ಎಫ್‌ ಜತೆಗೆ ಮಾಡಿಕೊಂಡಿದ್ದ ಮೈತ್ರಿಯೂ ಇಂಥದ್ದೇ ನಡೆಯಾಗಿತ್ತು. ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಹಾಗೂ ಅಸ್ಸಾಂ ಚುನಾವಣೆಯಲ್ಲಿ ಆಗಿರುವ ಸೋಲಿನ ವಿಮರ್ಶೆಗಾಗಿ ಸಮಿತಿ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಇಂಥ ಸಮಿತಿಗಳು ನೀಡಿದ ವರದಿಯನ್ನು ಸ್ವೀಕರಿಸಿ, ಸಮಿತಿ ಸೂಚಿಸಿದ ಸಲಹೆಗಳನ್ನು ಜಾರಿಗೊಳಿಸದಿದ್ದರೆ ಉದ್ದೇಶ ಈಡೇರುವುದಿಲ್ಲ ಎಂದು ಸಿಬಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT