ಶುಕ್ರವಾರ, ಮೇ 27, 2022
21 °C

Up Elections: ಬಿಜೆಪಿ ಸೇರಲು ಸಜ್ಜಾದ 'ಕಾಂಗ್ರೆಸ್ ಪೋಸ್ಟರ್ ಗರ್ಲ್' ಪ್ರಿಯಾಂಕಾ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Cut-outs of Priyanka Gandhi Vadra and Indira Gandhi flank cut-out of Maurya, the face of the 'ladki hoon lad sakti hoon' campaign. Credit: PTI Photo

ಲಖನೌ: ಕಾಂಗ್ರೆಸ್‌ನ ಪ್ರಚಾರ ಸಭೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು, ಉತ್ತರ ಪ್ರದೇಶದಲ್ಲಿ ಪೋಸ್ಟರ್‌ ಗರ್ಲ್ ಎಂದು ಖ್ಯಾತಿ ಪಡೆದಿದ್ದ ಪ್ರಿಯಾಂಕಾ ಮೌರ್ಯ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

ಪ್ರಿಯಾಂಕಾ ಅವರು ಬುಧವಾರ ಲಖನೌದಲ್ಲಿನ ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ.

ನಾನು ಲಂಚ ಕೊಡದಿರುವುದರಿಂದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿಲ್ಲ ಎಂಬ ಘೋಷಣೆ ಮೂಲಕ ಪ್ರಿಯಾಂಕಾ ಜನಪ್ರಿಯತೆ ಗಳಿಸಿದ್ದರು.

ಪ್ರಿಯಾಂಕಾ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯುವ ಸಾಧ್ಯತೆಯಿತ್ತಾದರೂ, ಅದನ್ನು ಬೇರೆಯವರಿಗೆ ನೀಡಲಾಗಿತ್ತು. ಹೀಗಾಗಿ ಪ್ರಿಯಾಂಕಾ ಅಸಮಾಧಾನಗೊಂಡಿದ್ದು, ಬಿಜೆಪಿ ಸೇರುವ ಸಾಧ್ಯತೆಯಿದೆ.

ಉತ್ತರ ಪ್ರದೇಶದ ಸರೋಜಿನಿ ನಗರ್ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಕಾರ್ಯನಿರತರಾಗಿದ್ದು, ಕಾಂಗ್ರೆಸ್ ಪರ ಕೆಲಸ ಮಾಡುತ್ತಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಲಭಿಸದೇ ಇರುವುದರಿಂದ ಬಿಜೆಪಿ ಸೇರಲು ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು