ನವದೆಹಲಿ: ಸೋಂಕಿತರ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಆದರೆ, ಸಂಪರ್ಕಕ್ಕೆ ಬಂದವರು ವಯಸ್ಸಾದವರು ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರಾಗಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಹೊಸ ಮಾರ್ಗಸೂಚಿ ಅನ್ವಯ ಈ ನಿರ್ಧಾರ ಪ್ರಕಟಿಸಲಾಗಿದೆ.

ಇದನ್ನೂ ಓದಿ:ಕಾಂಡೊಮ್ ಬಿಟ್ಟು ಗ್ಲೌಸ್ ತಯಾರಿಕೆಯತ್ತ ಹೊರಳಿದ ಕರೆಕ್ಸ್ ಕಂಪನಿ! ಕಾರಣ ಏನು?

ಲಕ್ಷಣವಿಲ್ಲದವರು, ಹೋಂ ಐಸೋಲೇಷನ್ ಮಾರ್ಗದರ್ಶಿ ಪ್ರಕಾರ ಗುಣಮುಖರಾದವರು, ಕೋವಿಡ್ ಚಿಕಿತ್ಸಾ ಕೇಂದ್ರಗಳಿಂದ ಬಿಡುಗಡೆಯಾಗುತ್ತಿರುವವರು (ಪರಿಷ್ಕೃತ ಮಾರ್ಗಸೂಚಿ ಪ್ರಕಾರ), ಅಂತರರಾಜ್ಯ ಪ್ರಯಾಣಿಕರು ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿಲ್ಲ ಎಂದು ನೂತನ ಮಾರ್ಗಸೂಚಿಯಲ್ಲಿ ಐಸಿಎಂಆರ್ ತಿಳಿಸಿದೆ.

ಹೊಸ ಪರೀಕ್ಷಾ ಮಾರ್ಗಸೂಚಿಯನ್ನು ಕೇಂದ್ರದ ಹೊಸ ಹೋಂ ಐಸೋಲೇಷನ್ ನೀತಿಯ ಜತೆ ತಾಳೆಯಾಗುವಂತೆ ರೂಪಿಸಲಾಗಿದೆ. ಇದರ ಪ್ರಕಾರ, 7 ದಿನಗಳ ಹೋಂ ಐಸೊಲೇಷನ್ ಕೊನೆಯ ಮೂರು ದಿನಗಳಲ್ಲಿ ಜ್ವರ ಅಥವಾ ಯಾವುದೇ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ.

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭಲ್ಲೇ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಇದನ್ನೂ ಓದಿ:ದೆಹಲಿ: 19,166 ಹೊಸ ಕೋವಿಡ್ ಪ್ರಕರಣ, ಪಾಸಿಟಿವಿಟಿ ದರ ಶೇ 25ಕ್ಕೆ ಏರಿಕೆ

ಸಮುದಾಯ ಮಟ್ಟದಲ್ಲಿ ಕೂಡ ರೋಗ ಲಕ್ಷಣ (ಕೆಮ್ಮು, ಜ್ವರ, ಗಂಟಲು ಕಿರಿಕಿರಿ, ರುಚಿ–ವಾಸನೆ ಇಲ್ಲದಿರುವುದು, ಉಸಿರಾಟ ಸಮಸ್ಯೆ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು) ಇದ್ದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರಾದರೆ 60 ವರ್ಷ ಮೇಲ್ಪಟ್ಟವರು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ (ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಶ್ವಾಸಕೋಶದ ಅಥವಾ ಕಿಡ್ನಿ ಸಮಸ್ಯೆ, ಬೊಜ್ಜು ಅಥವಾ ಮಾರಣಾಂತಿಕ ಕಾಯಿಲೆ) ಬಳಲುತ್ತಿರುವವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.