ಶುಕ್ರವಾರ, ಜನವರಿ 27, 2023
25 °C
ಗುಜರಾತ್‌: ಎಡಿಆರ್ ವಿಶ್ಲೇಷಣೆ

ಕಾರ್ಪೊರೇಟ್ ದೇಣಿಗೆ ಬಿಜೆಪಿಗೆ ಸಿಂಹಪಾಲು: ಎಡಿಆರ್ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಪೊರೇಟ್ ದೇಣಿಗೆ ಸ್ವೀಕರಿಸುವ ವಿಚಾರದಲ್ಲಿ ಗುಜರಾತ್‌ನ ಆಡಳಿತಾರೂಢ ಬಿಜೆಪಿ ಪಾರಮ್ಯ ಸಾಧಿಸಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಲ್ಲಿಕೆಯಾದ ಕಾರ್ಪೊರೇಟ್ ದೇಣಿಗೆಯಲ್ಲಿ ಶೇ 94ರಷ್ಟು ಪಾಲು ಬಿಜೆಪಿಗೆ ಹೋಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.

2016ರಿಂದ 2021ರ ಅವಧಿಯಲ್ಲಿ ಗುಜರಾತ್‌ನ ವಿವಿಧ ಪಕ್ಷಗಳು ಪಡೆದಿರುವ ಕಾರ್ಪೊರೇಟ್ ದೇಣಿಗೆಯ ದತ್ತಾಂಶವನ್ನು ಎಡಿಆರ್ ವಿಶ್ಲೇಷಣೆಗೆ ಒಳಪಡಿಸಿದೆ. ಐದು ವರ್ಷಗಳಲ್ಲಿ ಒಟ್ಟಾರೆ 1,571 ದೇಣಿಗೆದಾರರು ₹174.06 ಕೋಟಿ ಹಣವನ್ನು ವಿವಿಧ ಪಕ್ಷಗಳಿಗೆ ಪಾವತಿಸಿದ್ದಾರೆ. ಈ ಪೈಕಿ 1,519 ದೇಣಿಗೆದಾರರು ಬಿಜೆಪಿಗೆ ₹163.54 ಕೋಟಿ ಸಲ್ಲಿಸಿದ್ದಾರೆ. ಅಂದರೆ ಒಟ್ಟಾರೆ ದೇಣಿಗೆಯಲ್ಲಿ ಬಿಜೆಪಿ ಸಿಂಹಪಾಲು ಪಡೆದಿದೆ. 

ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ್ದ ವರದಿಗಳನ್ನು ವಿಶ್ಲೇಷಿಸಿ ಎಡಿಆರ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಬಿಜೆಪಿ, ಕಾಂಗ್ರೆಸ್, ಎಎಪಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆ ಸಲ್ಲಿಕೆಯಾಗಿದೆ. ದೇಣಿಗೆ ಸ್ವೀಕರಿಸಿದ ವಿಚಾರದಲ್ಲಿ ಬಿಜೆಪಿ ನಂತರದ ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಪಕ್ಷಕ್ಕೆ 47 ದೇಣಿಗೆದಾರರು ₹10.46 ಕೋಟಿ ನೀಡಿದ್ದಾರೆ. 

ಲೋಕಸಭೆಗೆ ಚುನಾವಣೆ ನಿಗದಿಯಾಗಿದ್ದ ವರ್ಷದಲ್ಲಿ ಅತ್ಯಧಿಕ ಕಾರ್ಪೊರೇಟ್ ದೇಣಿಗೆ ಸಂಗ್ರಹವಾಗಿದೆ. 2018–19ರ ಹಣಕಾಸು ವರ್ಷದಲ್ಲಿ ಗುಜರಾತ್‌ನಲ್ಲಿ 532 ದೇಣಿಗೆದಾರರು ₹48.83 ಕೋಟಿ ಹಣ ನೀಡಿದ್ದಾರೆ. ಈಗ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಡಿಆರ್ ಐದು ವರ್ಷಗಳ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. 

ಐದು ವರ್ಷಗಳ ಅವಧಿಯಲ್ಲಿ ಗುಜರಾತ್ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ₹4,014.58 ಕೋಟಿ ಕಾರ್ಪೊರೇಟ್ ದೇಣಿಗೆ ಪಾವತಿಯಾಗಿದೆ. ಇದರಲ್ಲಿ ಗುಜರಾತ್‌ ಪಾಲು ₹174.06 ಕೋಟಿ (ಶೇ 4.34). 

₹343 ಕೋಟಿ ಬಾಂಡ್: 2018 ಮಾರ್ಚ್‌ನಿಂದ 2022 ಅಕ್ಟೋಬರ್ ನಡುವಿನ ಅವಧಿಯಲ್ಲಿ ₹343 ಕೋಟಿ ಮೌಲ್ಯದ 595 ಚುನಾವಣಾ ಬಾಂಡ್‌ಗಳನ್ನು ಗುಜರಾತ್‌ನ ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್‌ ಮುಖ್ಯ ಕಚೇರಿಯಲ್ಲಿ ಖರೀದಿಸಲಾಗಿದೆ ಎಂದು ವರದಿ ತಿಳಿಸಿದೆ. 

ಚುನಾವಣೆ ವರ್ಷದಲ್ಲಿ ಭಾರಿ ಆದಾಯ

ಗುಜರಾತ್‌ನ ವಿವಿಧ ರಾಜಕೀಯ ಪಕ್ಷಗಳು ಚುಣಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಷಿಕ ಆದಾಯ ವರದಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಗಳಿಸಿದ ಆದಾಯದ ಮಾಹಿತಿಯನ್ನು ನೀಡಿವೆ. ಈ ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿದೆ. ಈ ವರದಿ ಪ್ರಕಾರ, ಐದು ವರ್ಷಗಳಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾರೆ ₹16,071 ಕೋಟಿ ಆದಾಯ ಗಳಿಸಿವೆ. 

ಈ ಪೈಕಿ, ರಾಜ್ಯದ 8 ರಾಷ್ಟ್ರೀಯ ಪಕ್ಷಗಳು ₹12,842 ಕೋಟಿ (ಶೇ 79.91) ಹಾಗೂ ಉಳಿದ ಪ್ರಾದೇಶಿಕ ಪಕ್ಷಗಳು ₹3,229 ಕೋಟಿ (ಶೇ 20.09) ಆದಾಯ ಘೋಷಿಸಿವೆ. ಲೋಕಸಭೆಗೆ ಚುನಾವಣೆ ನಡೆದಿದ್ದ 2019–20ರ ಹಣಕಾಸು ವರ್ಷದಲ್ಲಿ ಅತಿಹೆಚ್ಚು ಅಂದರೆ, ₹4,760 ಕೋಟಿ ಹಣವನ್ನು ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿವೆ. ಇದೇ ಅವಧಿಯಲ್ಲಿ ರಾಜ್ಯದ ಪ್ರಾದೇಶಿಕ ಪಕ್ಷಗಳು ₹1,089 ಕೋಟಿ ಸಂಗ್ರಹಿಸಿವೆ ಎಂದು ವರದಿ ತಿಳಿಸಿದೆ. 

ಆಧಾರ: ಎಡಿಆರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು