ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಟಾ, ಬೀಟಾ ರೂಪಾಂತರಿಗಳ ವಿರುದ್ಧವೂ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ

ಐಸಿಎಂಆರ್‌, ಎನ್‌ಐವಿ, ಭಾರತ್‌ ಬಯೋಟೆಕ್‌ ಸಂಶೋಧಕರಿಂದ ಅಧ್ಯಯನ
ಅಕ್ಷರ ಗಾತ್ರ

ಹೈದರಾಬಾದ್‌: ಕೊರೊನಾ ವೈರಸ್‌ನ ರೂಪಾಂತರ ತಳಿಗಳಾದ ಡೆಲ್ಟಾ ಮತ್ತು ಬೀಟಾಗಳ ವಿರುದ್ಧ ಕೋವ್ಯಾಕ್ಸಿನ್‌ ಲಸಿಕೆ ರಕ್ಷಣೆ ನೀಡುತ್ತದೆ ಎಂದು ಅಧ್ಯಯನ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ (ಎನ್‌ಐವಿ) ಮತ್ತು ಭಾರತ್ ಬಯೋಟೆಕ್ ಸಂಶೋಧಕರು ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಅಧ್ಯಯನ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಬಿ.1.617.2–ಡೆಲ್ಟಾ; ಭಾರತದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ರೂಪಾಂತರಿ ತಳಿ. ಇದು ದೇಶದಲ್ಲಿ ಕೋವಿಡ್‌ ಎರಡನೇ ಅಲೆಗೆ ಕಾರಣವಾಗಿದೆ. ‘ಕೊರೊನಾ ವೈರಸ್‌ನ ಉಪ ತಳಿಯಾಗಿರುವ ಡೆಲ್ಟಾ ಆತಂಕಕಾರಿಯಾಗಿದೆ,‘ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.

ಬಿ.1.351 ಆಥವಾ ಬೀಟಾ ಎಂದು ಕರೆಯಲಾಗುವ ಮತ್ತೊಂದು ತಳಿಯೂ ಭಾರತದಲ್ಲಿ ಕಾಣಿಸಿಕೊಂಡಿದ್ದು, ಇದರ ಮೇಲೆ ಲಸಿಕೆಗಳ ಪರಿಣಾಮ ಕಡಿಮೆ ಎಂದು ಹೇಳಲಾಗಿತ್ತು.

ಬಿ .1.351 ಮತ್ತು ಬಿ .1.617.2 ರ ವಿರುದ್ಧದ ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವವನ್ನು ಪರೀಕ್ಷೆ ಮಾಡುವ ಸಲುವಾಗಿ ಸಂಶೋಧಕರು ಕೋವಿಡ್‌ನಿಂದ ಚೇತರಿಸಿಕೊಂಡ 20 ರೋಗಿಗಳು ಮತ್ತು ಕೊವ್ಯಾಕ್ಸೀನ್‌ನ ಎರಡು ಡೋಸ್‌ ಪಡೆದ 17 ಜನರಿಂದ ಸೆರಾವನ್ನು ಸಂಗ್ರಹಿಸಿದ್ದಾರೆ. ಅದರ ತಟಸ್ಥೀಕರಣದ ಸಾಮರ್ಥ್ಯವನ್ನು ಕೊರೊನಾ ವೈರಸ್‌ನ ಮೂಲ ಮಾದರಿಯೊಂದಿಗೆ ಹೋಲಿಸಿ ಪರಿಶೀಲಿಸಿದ್ದಾರೆ.

ಕೋವ್ಯಾಕ್ಸಿನ್‌ ಲಸಿಕೆಯು ಬಿ .1351 ಮತ್ತು ಬಿ .1.617.2 ರೂಪಾಂತರಿಗಳ ವಿರುದ್ಧ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದೆ ಎಂದು ಸಂಶೋಧನೆಯ ಮುಖ್ಯಸ್ಥರಾದ ಡಾ. ಪ್ರಜ್ಞಾ ಯಾದವ್ ಹೇಳಿದ್ದಾರೆ.

ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ಬಿಬಿವಿ 152‘ ಅಥವಾ ಕೋವ್ಯಾಕ್ಸಿನ್‌ ಅನ್ನು ಐಸಿಎಂಆರ್-ಎನ್ಐವಿ ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಸಂಶೋಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT