ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 23,068 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 336 ಮಂದಿ ಮೃತಪಟ್ಟಿದ್ದು, 24,661 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ ಒಂದು ಕೋಟಿ (1,01,46,846) ಮೀರಿದ್ದು, 1,47,092 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 95.80 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,81,919 ಸಕ್ರಿಯ ಪ್ರಕರಣಗಳಿವೆ.

ಸದ್ಯದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್ ಕ್ರಿಸ್‌ಮಸ್ ಹಬ್ಬದಂದು ಸಂದರ್ಶಕರ ಭೇಟಿಗೆ ತಡೆ ನೀಡಿದೆ.

ಮಹಾರಾಷ್ಟ್ರದಲ್ಲಿ ರಾತ್ರಿ 11 ಗಂಟೆಯಿಂದ ಮುಂಜಾನೆ 6ಗಂಟೆವರೆಗೂ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗಿದೆ. ಕರ್ನಾಟಕದಲ್ಲಿ ಕರ್ಫ್ಯೂ ವಿಧಿಸಿ ಬಳಿಕ ಆದೇಶವನ್ನು ಹಿಂಪಡೆಯಲಾಯಿತು. ಇನ್ನೊಂದೆಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪಂಜಾಬ್ ಕೂಡ ಗುರುವಾರ ರಾತ್ರಿಯಿಂದ ರಾತ್ರಿ ಕರ್ಫ್ಯೂವನ್ನು ಹಿಂಪಡೆದಿದೆ. ಯುಕೆಯಿಂದ ಹಿಂದಿರುಗುವ ಪ್ರಯಾಣಿಕರಿಗಾಗಿ ರಾಜ್ಯಗಳು ಸಾಂಸ್ಥಿಕ ಕ್ವಾರಂಟೈನ್‌ಅನ್ನು ಹಾಕಲು ಪ್ರಾರಂಭಿಸಿವೆ.

ತೆಲಂಗಾಣದಲ್ಲಿ ಹೊಸ 518 ಪ್ರಕರಣ

ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 518 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದೇ ವೇಳೆ 3 ಜನರು ಮೃತಪಟ್ಟಿದ್ದಾರೆ. 491 ಜನರು ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆಯು 2,84,074ಕ್ಕೆ ತಲುಪಿದ್ದು, ಈವರೆಗೂ 2,75,708 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 1,527 ಜನರು ಸಾವಿಗೀಡಾಗಿದ್ದು, ಸದ್ಯ 1,527 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.