ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 8 ತಿಂಗಳ ಬಳಿಕ ಜೈಲು ಕೈದಿಗಳ ಭೇಟಿಗೆ ಅವಕಾಶ

Last Updated 24 ಅಕ್ಟೋಬರ್ 2020, 15:22 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶನಿವಾರ ಬೆಳಗ್ಗಿನ ವೇಳೆಗೆ 70 ಲಕ್ಷ ದಾಟಿದೆ.

ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 53,370 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 650 ಮಂದಿ ಮೃತಪಟ್ಟಿದ್ದಾರೆ. 67,549 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 78,14,682ಕ್ಕೆ ಏರಿಕೆಯಾಗಿದೆ. ಈವರೆಗೆ 1,17,956 ಮಂದಿ ಸಾವಿಗೀಡಾಗಿದ್ದು, 70,16,046 ಸೋಂಕಿತರು ಗುಣಮುಖರಾಗಿದ್ದಾರೆ.

ಸದ್ಯ, ದೇಶದಲ್ಲಿ 6,80,680 ಸಕ್ರಿಯ ಪ್ರಕರಣಗಳಿವೆ. ಇದು ಶುಕ್ರವಾರಕ್ಕಿಂತ 14,829 ಕಡಿಮೆ ಇದೆ ಎಂದೂ ಸಚಿವಾಲಯ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ 6,854 ಜನ ಸಾವು

ಕಳೆದ 24 ಗಂಟೆಗಳಲ್ಲಿ 25 ಜನರು ಸಾವಿಗೀಡಾಗುವುದರೊಂದಿಗೆ ಮೃತರ ಸಂಖ್ಯೆ 6,854ಕ್ಕೆ ಏರಿಕೆಯಾಗಿದೆ. 2,277 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 4,68,238ಕ್ಕೆ ಏರಿಕೆಯಾಗಿದೆ.

ಜೈಲು ಕೈದಿಗಳ ಭೇಟಿಗೆ ಅವಕಾಶ

ಕೋವಿಡ್ -19 ಕಾರಣದಿಂದಾಗಿ ಜೈಲು ಭೇಟಿಗಳನ್ನು ಸ್ಥಗಿತಗೊಳಿಸಿದ ಸುಮಾರು ಎಂಟು ತಿಂಗಳ ನಂತರ ನವೆಂಬರ್ 1 ರಿಂದ ಜೈಲು ಕೈದಿಗಳ ಭೇಟಿಗೆ ಸಂದರ್ಶಕರಿಗೆ ಅವಕಾಶ ನೀಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ

ಪಾಂಡಿಚೆರಿಯಲ್ಲಿ 34,112 ಜನ ಸೋಂಕಿತರು

ಪಾಂಡಿಚೆರಿಯಲ್ಲಿ ಶನಿವಾರ 128 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 34,112ಕ್ಕೆ ತಲುಪಿದ್ದರೆ, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಸಂಖ್ಯೆ 586ಕ್ಕೆ ತಲುಪಿದೆ.

ಮಹಾರಾಷ್ಟ್ರದಲ್ಲಿ 6,417 ಹೊಸ ಪ್ರಕರಣ

ಸೋಂಕಿತ ಪ್ರಕರಣಗಳ ರಾಜ್ಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 6,417 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 10,004 ಜನರು ಗುಣಮುಖರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 137 ಜನರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಸೋಂಕು ಪ್ರಕರಣಗಳು 16,38,961ಕ್ಕೆ ಏರಿಕೆಯಾಗಿವೆ, 14,55,107 ಜನರು ಗುಣಮುಖರಾಗಿದ್ದಾರೆ ಮತ್ತು 43,152 ಜನರು ಮೃತಪಟ್ಟಿದ್ದಾರೆ. 1,40,194 ಸಕ್ರಿಯ ಪ್ರಕರಣಗಳು ಇವೆ.

ರಾಜಸ್ಥಾನದಲ್ಲಿ 1,852 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ ಹೊಸದಾಗಿ 1,852 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 12 ಜನರು ಸಾವಿಗೀಡಾಗಿದ್ದಾರೆ. ಒಟ್ಟಾರೆ 1,84,422 ಸೋಂಕು ಪ್ರಕರಣಗಳಿದ್ದು, 1,826 ಮಂದಿ ಮೃತಪಟ್ಟಿದ್ದಾರೆ. 1,65,496 ಜನರು ಗುಣಮುಖ ಮತ್ತು 17,100 ಸಕ್ರಿಯ ಪ್ರಕರಣಗಳು ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ 52 ಜನ ಸಾವು

4,471 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 7,153 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 52 ಜನರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 7,98,378ಕ್ಕೆ ತಲುಪಿದೆ. ಈ ಪೈಕಿ 86,749 ಸಕ್ರಿಯ ಪ್ರಕರಣಗಳಿದ್ದರೆ, 7,00,737 ಜನರು ಗುಣಮುಖರಾಗಿದ್ದಾರೆ.

ಅಕ್ಟೋಬರ್ 23ರ ವರೆಗೆ ದೇಶದಲ್ಲಿ ಒಟ್ಟು 10.13 ಕೋಟಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 23ರಂದು 12,69,479 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT