ಗುರುವಾರ , ಸೆಪ್ಟೆಂಬರ್ 23, 2021
27 °C

ಡೆಲ್ಟಾಪ್ಲಸ್‌: ಸದ್ಯ ಆತಂಕವಿಲ್ಲ; ಆದರೆ ಎಚ್ಚರಿಕೆ ಅಗತ್ಯ; ಕೇಂದ್ರ ಸಲಹಾ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಮೂರು ಕೋವಿಡ್ ಲಸಿಕೆಗಳು, ರೂಪಾಂತರಿ ಸೋಂಕು ಡೆಲ್ಟಾ ಪ್ಲಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆಯೇ ಎಂಬುದನ್ನು ಭಾರತೀಯ ವಿಜ್ಞಾನಿಗಳು ಮುಂದಿನ ಒಂದು ವಾರದ ಅವಧಿಯಲ್ಲಿ ಗುರುತಿಸುವ ಸಂಭವವಿದೆ.

ಪ್ರಸ್ತುತ 11 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್‌ ಸೋಂಕಿನ 49 ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಸೋಂಕು ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ ಒಟ್ಟು 21 ಪ್ರಕರಣಗಳು ಪತ್ತೆಯಾಗಿದ್ದು, ಉಳಿದಂತೆ ತಮಿಳುನಾಡು 9, ಮಧ್ಯಪ್ರದೇಶ 7, ಕೇರಳದಲ್ಲಿ 3 ಪ್ರಕರಣ ಪತ್ತೆಯಾಗಿವೆ.

ಉಳಿದಂತೆ ಕರ್ನಾಟಕ, ಪಂಜಾಬ್, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ಒಡಿಶಾ, ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಈ ಸೋಂಕು ಪತ್ತೆಯಾಗಿದೆ.

‘ಮುಂದಿನ ಒಂದು ತಿಂಗಳಲ್ಲಿ ಡೆಲ್ಟಾ ಪ್ಲಸ್‌ ಸೋಂಕಿನ 400 ಪ್ರಕರಣ ಇರುತ್ತದೋ, 4,000 ಪ್ರಕರಣ ಇರುತ್ತವೋ ಎಂಬುದನ್ನು ನೋಡಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಇದು ಆತಂಕದ ವಿಷಯವಲ್ಲ. ಆದರೆ, ಎಚ್ಚರಿಕೆ ಅಗತ್ಯ’ ಎಂದು ಕೋವಿಡ್ ಕುರಿತ ಸರ್ಕಾರದ ಸಲಹಾ ಮಂಡಳಿಯ ಸದಸ್ಯ ಸುಧಾಂಶು ವ್ರತಿ ಹೇಳಿದರು.

ಹೊಸ ಸೋಂಕು ಮತ್ತು ಅದರ ವಿರುದ್ಧದ ಲಸಿಕೆಯ ಪ್ರತಿಕಾಯ ಸೃಷ್ಟಿ ಕುರಿತಂತೆ ವಿವಿಧ ಪ್ರಯೋಗಾಲಯಗಳು ಈಗಾಗಲೇ ಪರೀಕ್ಷೆಯನ್ನು ನಡೆಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು