ಗುರುವಾರ , ಜನವರಿ 28, 2021
27 °C

Covid-19: ಮೊದಲ ಮೂರು ಕೋಟಿ ಜನರಿಗೆ ಲಸಿಕೆ ನೀಡಲು 480 ಕೋಟಿ ರೂ. ಮಂಜೂರು

ಕಲ್ಯಾಣ್ ರೇ Updated:

ಅಕ್ಷರ ಗಾತ್ರ : | |

ನವದೆಹಲಿ: ಆರೋಗ್ಯ ಸಿಬ್ಬಂದಿಗಳು ಮತ್ತು ಮುಂಚೂಣಿಯ ಕೋವಿಡ್-19 ಸೇನಾನಿಗಳು ಒಳಗೊಂಡಂತೆ ಮೊದಲ ಮೂರು ಕೋಟಿ ಮಂದಿಗೆ ಕೊರೊನಾ ವೈರಸ್ ಲಸಿಕೆ ವಿತರಿಸಲು ಕೇಂದ್ರ ಹಣಕಾಸು ಸಚಿವಾಲಯವು 480 ಕೋಟಿ ರೂ.ಗಳನ್ನುಮಂಜೂರು ಮಾಡಿದೆ.

ಅಂದರೆ ಪ್ರತಿ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರವು 160 ರೂ.ಗಳ ಬಜೆಟ್ ಅನ್ನು ಹೊಂದಿದೆ. ಇದರಲ್ಲಿ ಎರಡು ಡೋಸ್ ಲಸಿಕೆ ಮತ್ತು ಮೂಲಸೌಕರ್ಯಗಳ ವೆಚ್ಚಗಳು ಸೇರಿವೆ.

ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳಾದ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಹಾಗೂ ಹೈದರಾಬಾದ್‌ನ ಭಾರತ್ ಬಯೋಟೆಕ್ ಜೊತೆ ಬೆಲೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯುತ್ತಿದ್ದು, ಒಪ್ಪಂದವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. 

ಗುರುವಾರ ನಡೆದ ಸಭೆಯಲ್ಲಿ ರಾಜ್ಯ ಆರೋಗ್ಯ ಸಚಿವರಿಗೆ ಬೆಲೆ ಮಾಹಿತಿಯನ್ನು ನೀಡಲಾಗಿದೆ. ಅಲ್ಲದೆ ಶುಕ್ರವಾರ 33 ರಾಜ್ಯಗಳ 736 ಜಿಲ್ಲೆಗಳಲ್ಲಿ ನಡೆಯಲಿರುವ ಲಸಿಕೆ ತಾಲೀಮು (ಡ್ರೈ-ರನ್) ಬಗ್ಗೆಯೂ ಚರ್ಚಿಸಲಾಗಿದೆ.

ಇದನ್ನೂ ಓದಿ: 

ಸೆರಂ ಇನ್‌ಸ್ಟಿಟ್ಯೂಟ್ ಮಾಲಿಕ ಅದರ್ ಪೂನವಾಲಾ ಅವರು ಲಸಿಕೆಯನ್ನು ಸರ್ಕಾರಕ್ಕೆ ಪ್ರತಿ ಡೋಸ್‌ಗೆ 200 ರೂ. ಮತ್ತು ಖಾಸಗಿ ಮಾರುಕಟ್ಟೆಯಲ್ಲಿ 1000 ರೂ.ಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಪ್ರತಿ ಡೋಸ್‌ಗೆ 70-80 ರೂ.ಗಳಿಗೆ ಖರೀದಿಸುವುದು ಸರ್ಕಾರದ ನಿರೀಕ್ಷೆಯಾಗಿದೆ.

ಪ್ರತಿ ವ್ಯಕ್ತಿಗೆ 160 ರೂ. ಅಂದರೆ ಯುರೋಪಿಯನ್ ಒಕ್ಕೂಟ ಬಹುಶಃ ಆಸ್ಟ್ರಾಜೆನೆಕಾದೊಂದಿಗೆ ಮಾತುಕತೆ ನಡೆಸುತ್ತಿರುವ ಬೆಲೆಯ ಅರ್ಧದಷ್ಟಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು