ಮಂಗಳವಾರ, ಮಾರ್ಚ್ 21, 2023
20 °C

ಕೋವಿಡ್ 3ನೇ ಅಲೆಯಲ್ಲಿ 2ನೇ ಅಲೆಯ ಅರ್ಧದಷ್ಟು ಪ್ರಕರಣ ಹರಡುವ ಸಾಧ್ಯತೆ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಸೋಂಕಿನ ಮೂರನೇ ಅಲೆಯು ಗರಿಷ್ಠ ಮಟ್ಟವನ್ನು ತಲುಪುವ ಭೀತಿ ಕಾಡುತ್ತಿದೆ. ಇದರ ಪ್ರಮಾಣವು ಎರಡನೇ ಅಲೆಯಲ್ಲಿ ಉಲ್ಬಣಗೊಂಡಿರುವ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಸರ್ಕಾರಿ ಕೋವಿಡ್ ನಿರ್ವಹಣೆಯ ಸಮಿತಿಯ ತಜ್ಞರು ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ಹೊಸ ರೂಪಾಂತರ 'ಸಾರ್ಸ್-ಕೋವ್-2' (SARS-CoV-2) ಹೊರಹೊಮ್ಮಿದರೆ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕು ಅತ್ಯಂತ ವೇಗವಾಗಿ ಹರಡುವ ಭೀತಿಯಿದೆ ಎಂದು ವಿಜ್ಞಾನಿ ಮಣೀಂದ್ರ ಅಗರವಾಲ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 

ಕಳೆದ ವರ್ಷ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ದತ್ತಾಂಶ ಬಳಸಿಕೊಂಡು ಕೊರೊನಾ ವೈರಸ್ ಪ್ರಕರಣಗಳ ಉಲ್ಬಣವನ್ನು ಅಂದಾಜಿಸಲು ತಜ್ಞ ಸಮಿತಿಯನ್ನು ನೇಮಕಗೊಳಿಸಿತ್ತು. ಆದರೆ ಎರಡನೇ ತರಂಗದ ಉಗ್ರ ಸ್ವರೂಪವನ್ನು ಅಂದಾಜಿಸುವಲ್ಲಿ ಸಮಿತಿ ವಿಫಲವಾಗಿತ್ತು ಎಂಬ ಬಗ್ಗೆ ಟೀಕೆಗಳು ಎದ್ದಿದ್ದವು.

ಮೂರನೇ ತರಂಗದ ಮುನ್ಸೂಚನೆಗಳ ಬಗ್ಗೆ ವಿವರಿಸಿದ ಅಗರವಾಲ್, ರೋಗನಿರೋಧಕ ಶಕ್ತಿ ನಷ್ಟ, ಲಸಿಕಾ ಕಾರ್ಯಕ್ರಮಗಳ ಪರಿಣಾಮಗಳು ಮತ್ತು ಹೆಚ್ಚು ವೈರಸ್ ರೂಪಾಂತರ ಸಾಧ್ಯತೆಗಳು ಪ್ರಮುಖ ಅಂಶಗಳಾಗಿವೆ ಎಂದಿದ್ದಾರೆ.

ಈ ವಿಷಯಗಳು ಎರಡನೇ ಅಲೆಯ ಮುನ್ಸೂಚನೆಯನ್ನು ರೂಪಿಸುವಾಗ ಇರಲಿಲ್ಲ. ಅಂತಿಮ ವಿಸೃತ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

ನಾವು ಮೂರು ಸನ್ನಿವೇಶಗಳನ್ನು ತಯಾರಿಸಿದ್ದೇವೆ. ಮೊದಲನೇಯದ್ದು ಆಶಾವಾದಿಯಾಗಿದ್ದು, ಆಗಸ್ಟ್ ವೇಳೆಗೆ ಜೀವನ ಸಹಜ ಸ್ಥಿತಿಗೆ ಮರಳಲಿದ್ದು, ಹೊಸ ರೂಪಾಂತರ ತಳಿಗಳ ಹಾವಳಿ ಇರುವುದಿಲ್ಲ ಎಂದು ಭಾವಿಸುತ್ತೇವೆ. ಎರಡನೇಯದ್ದು ಮಧ್ಯಂತರವಾಗಿದ್ದು, ಆಶಾವಾದಿ ಸನ್ನಿವೇಶದ ಜೊತೆಗೆ ಲಸಿಕಾ ಕಾರ್ಯಕ್ರಮವು ಶೇಕಡಾ 20ರಷ್ಟು ಕಡಿಮೆ ಪರಿಣಾಮಕಾರಿ ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಕೊನೆಯದ್ದು ಮಧ್ಯಂತರ ಸನ್ನಿವೇಶಗಳಿಗಿಂತ ವಿಭಿನ್ನವಾಗಿದೆ. ಆಗಸ್ಟ್‌ನಲ್ಲಿ ಹೊಸ ರೂಪಾಂತರದಿಂದ ಶೇಕಡಾ 25ರಷ್ಟು ಸೋಂಕು ಹರಡುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ (ಹೊಸತಾದ ಡೆಲ್ಟಾ ರೂಪಾಂತರ ಹೊರತುಪಡಿಸಿ) ಎಂದು ಅಗರವಾಲ್ ಹೇಳಿದ್ದಾರೆ.

ಅಗರವಾಲ್ ದತ್ತಾಂಶ ವರದಿಯ ಪ್ರಕಾರ, ಎರಡನೇ ಅಲೆಯು ಆಗಸ್ಟ್ ಮಧ್ಯಂತರ ಅವಧಿಯ ವೇಳೆಗೆ ಕಡಿಮೆಯಾಗಲಿದೆ. ಅಲ್ಲದೆ ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ಮೂರನೇ ಅಲೆಯು ಗರಿಷ್ಠ ಮಟ್ಟವನ್ನು ತಲುಪಲಿದೆ. ಈ ವೇಳೆಗೆ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 1.5 ಲಕ್ಷದಿಂದ 2 ಲಕ್ಷದ ವರೆಗೂ ಏರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು