ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: 9 ಜಿಲ್ಲೆಗಳಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಲಸಿಕೆ

Last Updated 10 ಜುಲೈ 2021, 9:12 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ 20 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ 45 ವರ್ಷ ಮೇಲ್ಪಟ್ಟ ಶೇಕಡ 100ರಷ್ಟು ಜನಸಂಖ್ಯೆಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಮುಂಬರುವ ಕೆಲವು ದಿನಗಳೊಳಗೆ ಈ ಮೈಲಿಗಲ್ಲನ್ನು ಸಾಧಿಸಲುಇನ್ನೂ ಮೂರು ಜಿಲ್ಲೆಗಳು ಸಜ್ಜಾಗಿವೆ.

‘ಕಾಶ್ಮೀರದ ಶೋಪಿಯಾನ್‌, ಬುಡ್ಗಾಮ್, ಬಾರಾಮುಲ್ಲಾ, ಬಂಡಿಪೊರ, ಗಂಡೇರ್ಬಲ್ ಜಿಲ್ಲೆಗಳು ಮತ್ತು ಜಮ್ಮು, ರಜೌರಿ, ಪೂಂಚ್‌, ಸಾಂಬಾದಲ್ಲಿ 45 ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗಿದೆ’ ಎಂದು ಜಮ್ಮು–ಕಾಶ್ಮೀರದ ಆರೋಗ್ಯ ಇಲಾಖೆಯು ಹೇಳಿದೆ.

ಅನಂತನಾಗ್‌,ಕುಲ್ಗಾಂ ಮತ್ತು ಪುಲ್ವಾಮದಲ್ಲಿ ಕ್ರಮವಾಗಿ ಶೇಕಡ 98.87, ಶೇಕಡ 98.60 ಮತ್ತು ಶೇಕಡ 96.88ರಷ್ಟು 45 ವರ್ಷ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾಗಿ ಶೇಕಡ 92.58ರಷ್ಟು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗಿದೆ.

ಜಮ್ಮು–ಕಾಶ್ಮೀರದಲ್ಲಿ ಪ್ರತಿನಿತ್ಯ ಸರಾಸರಿ 29,033 ಮಂದಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಈವರೆಗೆ 50,80,845 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. 2011ರ ಜನಗಣತಿಯ ಪ್ರಕಾರ ಜಮ್ಮು–ಕಾಶ್ಮೀರದಲ್ಲಿ 1.25 ಕೋಟಿ ಜನಸಂಖ್ಯೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT