ಶನಿವಾರ, ಜುಲೈ 2, 2022
26 °C

ಚೀನಾದಲ್ಲಿ ಶಿಕ್ಷಣ: ಎಚ್ಚರಿಕೆ ವಹಿಸಲು ಯುಜಿಸಿ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಸಂಬಂಧಿತ ಕಠಿಣ ನಿರ್ಬಂಧಗಳು ಚಾಲ್ತಿಯಲ್ಲಿರುವ ಕಾರಣ ಚೀನಾದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಲು ಆಸಕ್ತರಾಗಿರುವ ವಿದ್ಯಾರ್ಥಿಗಳು ಜಾಗ್ರತೆ ವಹಿಸಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಚ್ಚರಿಸಿದೆ.

ಚೀನಾದಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಪರಿಣಾಮ ಅನೇಕ ವಿದ್ಯಾರ್ಥಿಗಳು ದೇಶಕ್ಕೆ ಮರಳಲು ಹಾಗೂ ಶಿಕ್ಷಣವನ್ನು ಮುಂದುವರಿಸಲು ಆಗಿಲ್ಲ ಎಂದು ಯುಜಿಸಿ ಇದಕ್ಕೆ ಕಾರಣವನ್ನು ನೀಡಿದೆ. 

ನಿರ್ಬಂಧಗಳನ್ನು ಸಡಿಲಿಸದ ಕಾರಣ ಚೀನಾದ ಆಡಳಿತವು ಈಗಾಗಲೇ ಆನ್‌ಲೈನ್ ಮೂಲಕ ಕೋರ್ಸ್‌ಗಳನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದೆ ಎಂದೂ ಉಲ್ಲೇಖಿಸಿದೆ.

ನಿಯಮಗಳ ಪ್ರಕಾರ, ಯುಜಿಸಿ ಅಥವಾ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕೇವಲ ಆನ್‌ಲೈನ್ ಮೂಲಕ ನಡೆಸಿದ ಇಂತಹ ಕೋರ್ಸ್‌ಗಳಿಗೆ, ಪೂರ್ವಾನುಮತಿ ಇಲ್ಲದಿದ್ದಲ್ಲಿ ಮಾನ್ಯತೆ ನೀಡುವುದಿಲ್ಲ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು