ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್‌ನಿಂದ ಹೆಚ್ಚಿನ ರಕ್ಷಣೆ: ಅಧ್ಯಯನ ವರದಿ

Last Updated 11 ಜೂನ್ 2021, 20:21 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳು, ವ್ಯಕ್ತಿಯು ಕೋವಿಡ್‌ನಿಂದ ತೀವ್ರನಿಗಾ ಘಟಕಕ್ಕೆ ದಾಖಲಾಗುವುದರಿಂದ ಶೇ 94ರಷ್ಟು ಹಾಗೂ ಆಸ್ಪತ್ರೆಗೆ ದಾಖಲಾಗುವುದರಿಂದ ಶೇ 77ರಷ್ಟು ರಕ್ಷಣೆ ನೀಡುತ್ತವೆ’ ಎಂದು ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.

ಆರೋಗ್ಯ ಕ್ಷೇತ್ರದಲ್ಲಿರುವ 10 ಸಾವಿರ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ.

ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ 7,080 ಆರೋಗ್ಯ ಕಾರ್ಯಕರ್ತರಿಗೆ ಆಸ್ಪತ್ರೆಗೆ ದಾಖಲಾಗುವುದರಿಂದ ಶೇ 77ರಷ್ಟು, ಆಮ್ಲಜನಕ ಅವಲಂಬನೆಯಿಂದ ಶೇ 92ರಷ್ಟು ಹಾಗೂ ತೀವ್ರನಿಗಾ ಘಟಕಕ್ಕೆ ದಾಖಲಾಗುವುದರಿಂದ ಶೇ 94ರಷ್ಟು ರಕ್ಷಣೆ ಲಭಿಸಿದೆ.

ಒಂದೇ ಡೋಸ್‌ ಪಡೆದಿದ್ದರೂ ಆಸ್ಪತ್ರೆಗೆ ದಾಖಲಾಗುವುದರಿಂದ ಶೇ 70, ಆಮ್ಲಜನಕದ ಅವಲಂಬನೆಯಿಂದ ಶೇ 94, ಐಸಿಯುಗೆ ದಾಖಲಾಗುವುದರಿಂದ ಶೇ 95ರಷ್ಟು ಹಾಗೂ ಸೋಂಕಿಗೆ ಒಳಗಾಗುವುದರಿಂದ ಶೇ 60ರಷ್ಟು ರಕ್ಷಣೆ ಲಭಿಸಿದೆ ಎಂದು ವರದಿ ಹೇಳಿದೆ.

ಕೋವ್ಯಾಕ್ಸಿನ್‌ ಅಮೆರಿಕ ಪ್ರವೇಶ ವಿಳಂಬ:

ಹೈದರಾಬಾದ್‌ನ ಭಾರತ್‌ ಬಯೊಟೆಕ್‌ನ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ ಅಮೆರಿಕದ ಮಾರುಕಟ್ಟೆ ಪ‍್ರವೇಶಿಸುವುದು ವಿಳಂಬವಾಗಲಿದೆ. ಒಕ್ಯುಜೆನ್‌ ಎಂಬ ಕಂಪನಿಯು ಅಮೆರಿಕ ಮತ್ತು ಕೆನಡಾದಲ್ಲಿ ಭಾರತ್‌ ಬಯೊಟೆಕ್‌ನ ಪಾಲುದಾರನಾಗಿದೆ. ಕೋವ್ಯಾಕ್ಸಿನ್‌ನ ತುರ್ತು ಬಳಕೆ ಪರವಾನಗಿಯ (ಇಯುಎ) ಬದಲಿಗೆ ಬಯೊಲಾಜಿಕ್ಸ್‌ ಲೈಸೆನ್ಸ್‌ ಅಪ್ಲಿಕೇಷನ್ಸ್‌ಗೆ (ಬಿಎಲ್‌ಎ) ಅರ್ಜಿ ಸಲ್ಲಿಸುವಂತೆ ಒಕ್ಯುಜೆನ್‌ಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಸೂಚಿಸಿದೆ. ಬಿಎಲ್‌ಎ ಅಡಿ ಅನುಮತಿ ಪಡೆಯಬೇಕಿದ್ದರೆ ಹೆಚ್ಚುವರಿ ಪ್ರಯೋಗದ ದತ್ತಾಂಶವನ್ನೂ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT