ಬುಧವಾರ, ಡಿಸೆಂಬರ್ 8, 2021
25 °C

ಕಾಂಗ್ರೆಸ್‌ ಜತೆ ಕೈಜೋಡಿಸಲು ಸಿಪಿಎಂನಲ್ಲಿ ಒಮ್ಮತ?

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿಯ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ ಜತೆಗೆ ಸಹಮತ ಮುಂದುವರಿಸಲು ಸಿಪಿಎಂನಲ್ಲಿ ಒಮ್ಮತಮೂಡಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಗೊತ್ತುವಳಿಯ ರೂಪುರೇಷೆಯೊಂದನ್ನು ಭಾನುವಾರ ಮುಕ್ತಾಯವಾದ 3 ದಿನಗಳ ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಯಿತು. 

ಈ ರೂಪುರೇಷೆಯ ಆಧಾರದಲ್ಲಿ, ಪಾಲಿಟ್ ಬ್ಯೂರೊವು ಗೊತ್ತುವಳಿಯ ಪಠ್ಯ ಸಿದ್ಧಪಡಿಸಲಿದೆ. ಜನವರಿ ಯಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಈ ಗೊತ್ತುವಳಿಯನ್ನು ಮಂಡಿಸಲಾಗುವುದು. ಏಪ್ರಿಲ್‌ನಲ್ಲಿ ಕೇರಳದ ಕಣ್ಣೂರಿ ನಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಜೊತೆ ಸಹಯೋಗ ಮುಂದುವರೆರಿಸುವುದರ ಕುರಿತು ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರು. ಆದರೆ ವಾದಗಳು ನಡೆಯಲಿಲ್ಲ. ಕಾಂಗ್ರೆಸ್ ಜತೆ ಸಾಗುವುದಕ್ಕೆ ಹೆಚ್ಚಿನವರಿಂದ ಸಹಮತ ದೊರಕಿತು ಎನ್ನಲಾಗಿದೆ.

ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಳ್ಳುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಮರ್ಥ ಎದುರಾಳಿ ಕಾಂಗ್ರೆಸ್‌ ಅಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಲಯಾಳ ವಾರಪತ್ರಿಕೆ ‘ಚಿಂತ’ದಲ್ಲಿ ಲೇಖನ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಒಮ್ಮತ ಮೂಡುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಅಂಥ ವಿರೋಧ ಉಂಟಾಗಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು