ಅಮೆರಿಕ–ಕೆನಡಾ ಗಡಿಯಲ್ಲಿ ಭಾರತೀಯರ ಸಾವು: ಮಾಹಿತಿ ಕೋರಿಕೆ

ದೆಹಲಿ: ಅಮೆರಿಕ–ಕೆನಡಾ ಗಡಿ ಪ್ರದೇಶದ ಬಳಿ ಶಿಶು ಸೇರಿ ನಾಲ್ವರು ಭಾರತೀಯರ ಕುಟುಂಬವು ಶವವಾಗಿ ಪತ್ತೆಯಾದ ಪ್ರಕರಣದ ಕುರಿತು ಭಾರತದ ಅಧಿಕಾರಿಗಳು ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ದುರಂತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ಜನವರಿ 24 ರಂದು ನಡೆಸಲಾಗುವುದು ಎಂದು ಸರ್ಕಾರಿ ಮೂಲಗಳು ಇಲ್ಲಿ ಹೇಳಿವೆ.
ಅಮೆರಿಕದದಿಂದ ಕೆನಡಾಗೆ ಮಾನವ ಕಳ್ಳಸಾಗಣೆ ನಡೆಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆರೋಪದಲ್ಲಿ ಒಬ್ಬ ಅಮೆರಿಕ ಪ್ರಜೆ ಸೇರಿದಂತೆ ಸೂಕ್ತ ದಾಖಲೆಗಳಿಲ್ಲದ 7 ಜನರನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದಾರೆ.
ಜನವರಿ 19 ರಂದು ಅಮೆರಿಕ-ಕೆನಡಾ ಗಡಿಯ ಸಮೀಪವಿರುವ ಮಿನ್ನೇಸೋಟ ರಾಜ್ಯದಲ್ಲಿ ಸರಿಯಾದ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಜನರ ಗುಂಪನ್ನು ಅಮೆರಿಕ ಅಧಿಕಾರಿಗಳು ಪತ್ತೆ ಹಚ್ಚಿದ್ದರು ಎಂದು ಮೂಲಗಳು ತಿಳಿಸಿವೆ.
ಅವರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕೆನಡಾದ ಅಧಿಕಾರಿಗಳು ಶೋಧ ನಡೆಸಿದಾಗ ಗಡಿಯ ಕೆನಡಾದ ಭಾಗದ ಮ್ಯಾನಿಟೋಬಾ ಪ್ರಾಂತ್ಯದಲ್ಲಿ ನಾಲ್ಕು ಶವಗಳು ಚಳಿಯಿಂದ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.