ಸೋಮವಾರ, ಅಕ್ಟೋಬರ್ 3, 2022
25 °C

ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಸೇನೆಗೆ ಹಸ್ತಾಂತರಿಸಿದ ರಾಜನಾಥ್ ಸಿಂಗ್: ಏನೇನಿವೆ?

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ವದೇಶಿ ನಿರ್ಮಿತ ಹಲವು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸೇನೆಗೆ ಹಸ್ತಾಂತರಿಸಿದರು.

ಗಡಿ ಪ್ರದೇಶಗಳಲ್ಲಿ ಸೇನೆಯು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಚೀನಾ ಗಡಿಯಲ್ಲಿರುವ ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರ ಬಳಿಯಲ್ಲಿ ಕಾರ್ಯಾಚರಣೆ ನಡೆಸುವುದಕ್ಕಾಗಿ ಸ್ವದೇಶಿ ನಿರ್ಮಿತ ‘ಲ್ಯಾಂಡಿಂಗ್ ಅಟ್ಯಾಕ್ ಕ್ರಾಫ್ಟ್’ ಅನ್ನು ರಾಜನಾಥ್ ಸೇನೆಗೆ ನೀಡಿದರು. ಜತೆಗೆ, ಸಿಬ್ಬಂದಿ ನಿರೋಧಕ ನೆಲ ಬಾಂಬ್ ‘ನಿಪುಣ್’, ಇನ್‌ಫೆಂಟ್ರಿ ಕಾಂಬ್ಯಾಟ್ ವೆಹಿಕಲ್ಸ್ ಹಾಗೂ ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹಸ್ತಾಂತರ ಮಾಡಿದರು.

ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆ ವೃದ್ಧಿಗೆ ನೆರವಾಗಲು ಕೇಂದ್ರ ಸರ್ಕಾರ ಅನೇಕ ನೀತಿ–ನಿರ್ಧಾರಗಳನ್ನು ಕೈಗೊಂಡಿದೆ. ದೇಶದಲ್ಲಿ ಉತ್ಪಾದನೆಯಾಗುವ ಶಸ್ತ್ರಾಸ್ತ್ರಗಳಲ್ಲಿ ಮುಖಾಮುಖಿ ಹೋರಾಟಕ್ಕೆ ಬೇಕಾದವು, ಇನ್‌ಫೆಂಟ್ರಿ ಕಾಂಬ್ಯಾಟ್ ವೆಹಿಕಲ್ಸ್ ಸೇರಿವೆ ಎಂದು ಭಾರತೀಯ ಸೇನೆಯ ಮುಖ್ಯ ಎಂಜಿನಿಯರ್, ಲೆಫ್ಟಿನೆಂಟ್ ಜನರಲ್ ಹರ್‌ಪಾಲ್ ಸಿಂಗ್ ತಿಳಿಸಿದರು.

ಸವಾಲು ಎದುರಿಸಲು ಸಿದ್ಧ: ಹರ್‌ಪಾಲ್ ಸಿಂಗ್

ಯಾವುದೇ ರೀತಿಯ ಸವಾಲು, ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರ ಪರವಾಗಿ ಹರ್‌ಪಾಲ್ ಸಿಂಗ್ ಹೇಳಿದರು.

‘ಪಶ್ಚಿಮದಿಂದ (ಪಾಕಿಸ್ತಾನ) ಇರಬಹುದು ಅಥವಾ ಅತಿ ಎತ್ತರದ ಪ್ರದೇಶಗಳಾದ (ಚೀನಾ ಗಡಿ) ಲಡಾಖ್ ಇರಬಹುದು, ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು