ಭಾನುವಾರ, ಮೇ 22, 2022
25 °C
ಗಣರಾಜ್ಯೋತ್ಸವ ಸಂಭ್ರಮ, ಕೋವಿಡ್‌ ಹಿನ್ನೆಲೆ ಸೀಮಿತ ಜನರಿಗೆ ಅವಕಾಶ

ಗಣರಾಜ್ಯೋತ್ಸವ: ಪಥಸಂಚಲನಕ್ಕೆ ಹೊಸ ಮೆರಗು, ರಾಜಪಥಕ್ಕೆ ಸಿಂಗಾರ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ಈ ಬಾರಿ ಗಣರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.

ರಾಜಪಥದ ಇಬ್ಬದಿಗಳಲ್ಲೂ 750 ಮೀ. ಉದ್ದದ ಕೈಯಿಂದ ಬಿಡಿಸಿದ ಸುರುಳಿಗಳು, ಕೇಂದ್ರ ರಾಜಮಾರ್ಗದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗಿರುವ 75 ವಿಮಾನಗಳು, ವಿಜಯ ಚೌಕದ ಸುತ್ತ ಹಾರಲಿರುವ 1000 ಡ್ರೋನ್‌ಗಳು. ಇದರೊಂದಿಗೆ ಜರುಗುವ ಪಥಸಂಚಲನ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಗೆ ಹೊಸ ಮೆರಗನ್ನು ನೀಡಲಿದೆ.

ಆದರೆ ಗಣರಾಜ್ಯ ಸಮಾರಂಭವನ್ನು ಕೋವಿಡ್‌ ಕರಿನೆರಳು ಆವರಿಸಿದೆ. ಭವ್ಯ ಸಮಾರಂಭವು ಕೋವಿಡ್‌ ಹರಡಲು ಒಂದು ವೇದಿಕೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಇದರಲ್ಲಿ ಭಾಗವಹಿಸುವ ಜನಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ. ಪಥಸಂಚಲನದ ಕಾರ್ಯಕ್ರಮದಲ್ಲಿ ಭೌತಿಕ ಜಾಜರಾತಿಗೆ 5–8 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. 

ಸಾರ್ವಜನಿಕರು ಪಥಸಂಚಲನವನ್ನು ತಮ್ಮ ವಾಹಿನಿಗಳಲ್ಲಿ ಇಲ್ಲವೇ ಆನ್‌ಲೈನ್‌ನಲ್ಲಿ ವೀಕ್ಷಿಸುವಂತೆಯೂ ಸಚಿವಾಲಯ ಸೂಚಿಸಿದೆ. 

ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಅಭಿವೃದ್ಧಿ ಹೊಂದಿದ ಬಾಟ್‌ಲ್ಯಾಬ್ ಸಂಸ್ಥೆಯು ಜನವರಿ 29 ರಂದು ಜರುಗುವ 1000 ಡ್ರೋನ್‌ಗಳ ಹಾರಾಟ ನಿರ್ವಹಿಸುವ ಹೊಣೆ ಹೊತ್ತುಕೊಂಡಿದೆ.

75 ವಿಮಾನಗಳ ಹಾರಾಟ ಸ್ಪಷ್ಟವಾಗಿ ಗೋಚರಿಸುವ ಸಲುವಾಗಿ ಈ ಮೊದಲು ಪ್ರಾರಂಭವಾಗುತ್ತಿದ್ದ ಬೆಳಿಗ್ಗೆ 10 ಗಂಟೆ ಬದಲಿಗೆ 10.30ಕ್ಕೆ ಪಥಸಂಚಲನ ಆರಂಭವಾಗಲಿದೆ. ಭಾರತೀಯ ವಾಯುದಳ ಇತ್ತೀಚೆಗೆ ತನ್ನ ಬತ್ತಳಿಕೆಗೆ ಸೇರಿಸಿಕೊಂಡ ರಫೇಲ್‌ ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಲಿವೆ. ಇದೇ ಮೊದಲ ಬಾರಿಗೆ ಸೆಂಟ್ರಲ್‌ ವಿಸ್ತಾ ಯೋಜನೆಯು ಸಾರ್ವಜನಿಕರ ಮುಂದೆ ಬಿತ್ತರಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು