ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಮಟ್ಟ ತಲುಪಿದ ದೆಹಲಿಯ ವಾಯುಮಾಲಿನ್ಯ

Last Updated 10 ಫೆಬ್ರುವರಿ 2021, 1:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಬುಧವಾರ ಕುಸಿತಗೊಂಡಿದೆ. ಬೆಳಿಗ್ಗೆ 6 ಗಂಟೆ ವೇಳೆ, ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 325 ದಾಖಲಾಗಿದೆ.

ಗಾಳಿಯ ಗುಣಮಟ್ಟ 'ಕಳಪೆ ಮಟ್ಟ'ವನ್ನು ತಲುಪಿದೆ ಎಂದು ವಾಯು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (ಎಸ್‌ಎಎಫ್ಎಆರ್) ವರದಿ ಮಾಡಿದೆ.

ಬುಧವಾರ ಬೆಳಗ್ಗೆ ನಗರದ ಹಲವಾರು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಜತೆಗೆ, ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟದಲ್ಲಿ ಉಳಿದುಕೊಂಡಿದೆ.

ಕೆಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿರುವ ಕಾರಣ ವಾಹನ ಸಂಚಾರರಿಗೂ ತೊಂದರೆಯಾಗಿದೆ. ರಾಜಧಾನಿಯಲ್ಲಿ ಪಶ್ಚಿಮದಿಂದ ಬೀಸುತ್ತಿರುವ ಗಾಳಿಯ ವೇಗ ಹೆಚ್ಚಾದರೆ, ವಾಯು ಗುಣಮಟ್ಟ ಸುಧಾರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT